Monday, January 20, 2025
ಸುದ್ದಿ

ರೇಬೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮೃತ್ಯು – ಕಹಳೆ ನ್ಯೂಸ್

ಪಲಕ್ಕಾಡ್ : ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೇಬೀಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ 1 ತಿಂಗಳ ಬಳಿಕ ಮೃತಪಟ್ಟಿರುವ ಘಟನೆ ಕೇರಳದ ಪಲಕ್ಕಾಡ್‍ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ವಿದ್ಯಾರ್ಥಿನಿಯನ್ನು ಪಲಕ್ಕಾಡ್ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ ಶ್ರೀಲಕ್ಷ್ಮಿ (18) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಲಕ್ಷ್ಮಿ ಮೇ 30ರ ಬೆಳಗ್ಗೆ ಕಾಲೇಜಿಗೆ ಹೋಗುವಾಗ ಅವರ ಪಕ್ಕದ ಮನೆಯ ನಾಯಿ ಆಕೆಯೆ ಕಚ್ಚಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ಲಸಿಕೆಯನ್ನು ಶ್ರೀಲಕ್ಷ್ಮಿ ಪಡೆದುಕೊಂಡಿದ್ದಳು. ಆದರೆ ಇದರ ನಡುವೆ ಕೆಲವು ದಿನಗಳ ಹಿಂದೆ ಆಕೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮಿಯನ್ನು ಖಾಸಗಿ ಆಸ್ಪತ್ರೆಗೆ ಕೊರೆದೊಯ್ಯಲಾಯಿತು.

ವೈದ್ಯರು ಪರೀಕ್ಷಿಸಿದಾಗ ರೇಬೀಸ್ ಕಾಯಿಲೆಯ ಲಕ್ಷಣಗಳು ಕಂಡುಬಂದಿದ್ದು, ತಕ್ಷಣ ಆಕೆಯನ್ನು ತ್ರಿಸ್ಸೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶ್ರೀಲಕ್ಷ್ಮಿ ಸಾವನ್ನಪ್ಪಿದ್ದಾಳೆ.