Monday, January 20, 2025
ಸುದ್ದಿ

ಕೊಕ್ಕಡದ ಪಂಚಮಿ ಹಿತಾರ್ಯುಧಾಮದ ಡಾ.ಮೋಹನದಾಸ ಗೌಡ ಅವರಿಗೆ, ಉಜಿರೆಯ ಬೆನಕ ಆಸ್ಪತ್ರೆಯ ನಿರ್ದೇಶಕ ರಿಂದ ಗೌರವಾರ್ಪಣೆ – ಕಹಳೆ ನ್ಯೂಸ್

ಉಜಿರೆ: ಉಜಿರೆಯ ಬೆನಕ ಆಸ್ಪತ್ರೆಯ ನಿರ್ದೇಶಕ ಡಾ.ಗೋಪಾಲಕೃಷ್ಣ ಹಾಗೂ ಡಾ.ಭಾರತಿ ಅವರು ವೈದ್ಯರ ದಿನದ ಅಂಗವಾಗಿ ಕೊಕ್ಕಡದ ಪಂಚಮಿ ಹಿತಾರ್ಯುಧಾಮದ ನಿರ್ದೇಶಕರಾದ ಡಾ.ಮೋಹನದಾಸ ಗೌಡ ಅವರನ್ನು ಫಲ ಪುಷ್ಪಗಳನ್ನಿತ್ತು ಅಭಿವಂದಿಸಿದರು.ಡಾ.ಮೋಹನದಾಸ ಗೌಡ ಅವರು ಕಳೆದ ಆರು ದಶಕಗಳಿಂದ ಸಮುದಾಯ ಮಟ್ಟದಲ್ಲಿ ಅರೋಗ್ಯ ಕ್ಷೇತ್ರದಲ್ಲಿ ನೀಡುತ್ತಿರುವ ಅನುಪಮ ಸೇವೆಗಾಗಿ ರಾಷ್ಟ್ರೀಯ ವೈದ್ಯರ ದಿನದಂದು ಗೌರವಿಸಿದ್ದೇವೆ ಎಂದು ಡಾ.ಗೋಪಾಲಕೃಷ್ಣ ತಿಳಿಸಿದರು. ಡಾ.ಮೋಹನದಾಸ ಗೌಡ ಅವರ ಸೇವಾಮನೋಭಾವದ ಮೂಲಕ ಮಾನವೀಯತೆ ಮೆರೆದಿರುವ ವೃತ್ತಿ ಪರತೆ ಅನುಕರಣೀಯ ಎಂದು ಶ್ಲಾಘಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ವೈದ್ಯರ ದಿನವು ವೈಯುಕ್ತಿಕ ಜೀವನ ಮತ್ತು ಸಮುದಾಯಗಳಿಗೆ ವೈದ್ಯರ ಕೊಡುಗೆಗಳನ್ನುಗುರುತಿಸಲು ಭಾರತದಲ್ಲಿ ಆಚರಿಸಲಾಗುತ್ತಿದೆ. ಉಜಿರೆಯ ಬೆನಕ ಆಸ್ಪತ್ರೆಯು ಪ್ರತಿ ವರ್ಷ ವೈದ್ಯರ ದಿನದಂದು ತಾಲೂಕಿನ ಹಿರಿಯ ವೈದ್ಯರನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕಾರ್ಯಕ್ರಮದಲ್ಲಿ ಡಾ.ತಾರಾ ಗಣೇಶ್, ಉಜಿರೆಯ ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್, ಕಾರ್ಯನಿರ್ವಹಣಾಧಿಕಾರಿ ದೇವಸ್ಯ ಹಾಗೂ ಪಂಚಮಿ ಹಿತಾರ್ಯುಧಾಮದ ಸಿಬ್ಬಂಧಿ ಭಾಗವಹಿಸಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು