Sunday, January 19, 2025
ಸುದ್ದಿ

40ಕ್ಕೂ ಅಧಿಕ ಮಹಿಳೆಯರ ಜೊತೆ ಶಿಕ್ಷಕನ ಕಾಮದಾಟ: ವಿಡಿಯೋ ವೈರಲ್ ಬೆನ್ನಲೆ ಬಿತ್ತು ಧರ್ಮದೇಟು…!!- ಕಹಳೆ ನ್ಯೂಸ್

ಕೊಪ್ಪಳ : ನೆರೆ ಮನೆಯ ಮಹಿಳೆಯರನ್ನು ಪುಸಲಾಯಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡ ಶಿಕ್ಷಕನ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಧರ್ಮದೇಟು ನೀಡಿದ್ದು, ಆರೋಪಿ ಇದೀಗ ತಲೆ ಮರೆಸಿಕೊಂಡಿದ್ದಾನೆ. ಇದೀಗ ಆಟ- ಪಾಠದ ನೆಪದಲ್ಲಿ ಮಕ್ಕಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದು ಮಕ್ಕಳ ಮೇಲೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಬೆಳಕಿಗೆ ಬಂದದಿದೆ. ಪಕ್ಕದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಿಂಗಾಪೂರ ಗ್ರಾಮದ ಶಾಲೆಯಲ್ಲಿ ಕೆಸಲ ಮಾಡುತ್ತಿದ್ದ ಶಿಕ್ಷಕ ಅಜರುದ್ಧೀನ್ ಆರೋಪಿ. ಈತ ಪರಸ್ತ್ರೀಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಕೆಲಸದಿಂದ ಅಮಾನತು ಮಾಡಲಾಗಿದೆ. ಈತನ ಕಾಮದಾಟದ ವಿಚಾರ ಬಯಲಾಗುತ್ತಿದ್ದಂತೆ ಸಿಟ್ಟಿಗೆದ್ದ ಸಾರ್ವಜನಿಕರು ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಅವರ ಹತ್ತಿರ ಹೋಗುತ್ತಿದ್ದ ಈತ, ಅವರ ಗುಪ್ತಾಂಗ ಮುಟ್ಟಿ ದೈಹಿಕ ಕಿರುಕುಳ ಕೊಡುತ್ತಿದ್ದ. ಮಕ್ಕಳಿಂದಲೇ ಬಟ್ಟೆ ಬಿಚ್ಚಿಸಿ ವಿಕೃತ ಆನಂದ ಪಡೆಯುತ್ತಿದ್ದನಂತೆ. ಇನ್ನು ಇಬ್ಬರು ಮಹಿಳೆಯರನ್ನ ಪರಿಚಯಿಸಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ಈತ, ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯರನ್ನ ಲೈಂಗಿಕವಾಗಿ ಬಳಿಸಿಕೊಂಡಿದ್ದನ್ನ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ ಶಿಕ್ಷಕ, ಬಳಿಕ ಆ ಮಹಿಳೆಯರಿಗೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದ. ಮತ್ತಷ್ಟು ಮಹಿಳೆಯರನ್ನು ನನಗೆ ಪರಿಚಯಿಸಬೇಕು, ಅವರೊಂದಿಗೆ ಲೈಂಗಿಕಸಂಪರ್ಕ ಬೆಳೆಸಲು ನನಗೆ ಸಹಕರಿಸಬೇಕು, ಇಲ್ಲವಾದಲ್ಲಿ ನಿಮ್ಮೊಂದಿಗೆ ನಾನಿದ್ದ ವಿಡಿಯೋವನ್ನು ವೈರಲ್ ಮಾಡುವೆ ಎಂದು ಹೆದರಿಸಿದ್ದನಂತೆ. ಇದೇ ರೀತಿ ಈತ ಸುಮಾರು 40 ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.