Sunday, January 19, 2025
ಪುತ್ತೂರುಸುದ್ದಿ

ವಿಟ್ಲದಲ್ಲಿ ಅಂತರ್ ರಾಜ್ಯ ಡ್ರಗ್ಸ್ ಪೆಡ್ಲರ್ ಗಳ ಓಡಾಟ; ಮಾದಕ ವಸ್ತು ಎಂ.ಡಿ, ಗಾಂಜಾ ಮತ್ತು ತಲವಾರು ಸಹಿತ ಮೂವರು ಪೊಲೀಸ್ ವಶಕ್ಕೆ- ಕಹಳೆ ನ್ಯೂಸ್

ವಿಟ್ಲ: ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳಾದ ಎಂಡಿಎಮ್‌ಎ, ಗಾಂಜಾವನ್ನು ಮತ್ತು ಸಾಗಿಸುತ್ತಿದ್ದ ಆರೋಪಿಗಳನ್ನು ವಶ ಪಡಿಸಿಕೊಂಡ ಘಟನೆ ವಿಟ್ಲದಲ್ಲಿ ನಡೆದಿದೆ.

ಬಂಧಿತರನ್ನು ಮೂಲತಃ ನೆಲ್ಲಿಗುಡ್ಡೆ ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಸಾಲೆತ್ತೂರು ಸಮೀಪದ ಕಟ್ಟೆತ್ತಿಲ್ಲ ಜಲಲೂದ್ದಿನ್, ಒಕ್ಕೆತ್ತೂರು ಪೈಝಲ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸಾವಿರಾರು ರೂ ಮೌಲ್ಯದ ಎಂಡಿಎಮ್‌ಎ, ಗಾಂಜಾ, ಒಂದು ಆಟೋ ರಿಕ್ಷಾ ಹಾಗೂ ಒಂದು ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದು, ಕೇರಳದಿಂದ ಕರ್ನಾಟಕ ಭಾಗಗಳಿಗೆ ಮಾದಕ ವಸ್ತುಗಳನ್ನು ಸಾಗಾಟ ಮಾಡುವ ಇವರು ಅಂತರಾಜ್ಯ ಡ್ರಗ್ ಪೆಡ್ಲರ್ ಗಳಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಸಬ್ ಇನ್ಸೆಕ್ಟರ್ ಸಂದೀಪ್, ಮಂಜುನಾಥ್, ಸಿಬ್ಬಂದಿಗಳಾದ ಹೇಮಾರಾಜ್, ಅಶೋಕ್, ವಿಠಲ್ ರವರು ಪಾಲ್ಗೊಂಡಿದ್ದರು.