Sunday, January 19, 2025
ಸುದ್ದಿ

ಪತ್ರಕರ್ತ ಜಿತೇಂದ್ರ ಕುಂದೇಶ್ವರಗೆ ವಿಶ್ವ ಸಂವಾದ ಗೌರವ – ಕಹಳೆ ನ್ಯೂಸ್

ಮಂಗಳೂರು, ಜೂ 24 :  ವಿಶ್ವವಾಣಿಯ ವಿಶೇಷ ವರದಿಗಾರ ಜಿತೇಂದ್ರ ಕುಂದೇಶ್ವರ ಅವರಿಗೆ ಬೆಂಗಳೂರಿನ ಕರ್ನಾಟಕ ವಿಶ್ವ ಸಂವಾದ ಕೇಂದ್ರ ವತಿಯಿಂದ ಜೂ.24ರಂದು ನಡೆಯುವ ನಾರದ ಜಯಂತ್ಯುತ್ಸವದಲ್ಲಿ ವಿಶೇಷ ಗೌರವ ಸನ್ಮಾನ ನಡೆಯಲಿದೆ. 

ಬೆಂಗಳೂರು ಜಯನಗರದ ರಾಷ್ಟ್ರೋತ್ಥಾನ ಶಾರೀರಿಕ ಕೇಂದ್ರರದ ನಾರದ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಅಂಕಣಕಾರ ದು.ಗು ಲಕ್ಷ್ಮಣ ಅವರು ಸನ್ಮಾನಿಸುವರು. ಇದೇ ಸಂದರ್ಭ ಹಸಿರುವಾಸಿ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ಭಡ್ತಿ ಅವರಿಗೂ ಈ ಸಂದರ್ಭ ಸನ್ಮಾನಿಸಲಾಗುವುದು.
ಜಿತೇಂದ್ರ ಕುಂದೇಶ್ವರ ಅವರು ಕರಾವಳಿಯ ಅಪರಾಧ ಲೋಕದ ಕುರಿತು ವಿಶೇಷ ವರದಿಗಳು, ಸಂಶೋಧನಾತ್ಮಕ ಲೇಖನಗಳನ್ನು ಮಾಡಿದವರು.
ಕೊರಗರ ಬದುಕಿಗೆ ಮರುಗುವವರೇ ಇಲ್ಲ ವಿಜಯಕರ್ನಾಟಕದಲ್ಲಿ ಪ್ರಕಟವಾದ ಸಾಮಾಜಿಕ ಕಳಕಳಿಯ ವರದಿಗೆ 2003ರಲ್ಲಿ ವಡ್ಡರ್ಸೆ ಪ್ರಶಸ್ತಿ. 2004ರಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಕುರಿತು ಬರೆದ ಮಾನವೀಯ ಕಳಕಳಿಯ ವರದಿಗೆ ಗ್ರಾಮೀಣ ವರದಿಗಾರಿಕೆಗೆ ಪ.ಗೋ. ಪ್ರಶಸ್ತಿ. 2010ರಲ್ಲಿ ಮಂಗಳೂರಿನ ಬೀದಿ ಬದಿಯ ಮಕ್ಕಳ ಬದುಕಿನ ಬವಣೆ ಕುರಿತ ಮಾನವೀಯ ಕಳಕಳಿ ವರದಿಗೆ ರಾಜ್ಯಪಾಲರಿಂದ ಚರಕ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಗಳ ಇರುವಿಕೆ ಕುರಿತು ಮೊಟ್ಟ ಮೊದಲ ಬಾರಿಗೆ ವರದಿ. ಮಂಗಳೂರಿನಲ್ಲಿ ಇಂಡಿಯನ್ ಮುಜಾಹಿದ್ದೀನ್ ಕುರಿತ ಸರಣಿ ಲೇಖನಗಳ ಮೂಲಕ ಕರಾವಳಿಯಲ್ಲಿ ಬೇರೂರುತ್ತಿರುವ ಉಗ್ರವಾದ, ಭೂಗತ ಲೋಕದ, ಅಪರಾಧ ಲೋಕದ ವಿಶೇಷ ವರದಿಗಳು. ವಿಶೇಷ ಅಂಕಣಗಳಿಂದ ಪರಿಚಿತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡ ಪ್ರಭದಲ್ಲಿ ಶಿರಾಡಿ ಘಾಟಿ ಕುರಿತ ಸರಣಿ ಲೇಖನಗಳಿಂದ ಎಚ್ಚೆತ್ತ ರಾಜ್ಯ ಸರಕಾರ ರಸ್ತೆ ಕಾಂಕ್ರಿಟೀಕರಣಗೊಳಿಸಿದೆ. ವಿಶ್ವವಾಣಿಯಲ್ಲಿ ವಿಶೇಷ ವರದಿಗಳ ಮೂಲಕ,‌ವಾರನೋಟ ಜನಪ್ರಿಯ ಅಂಕಣದ ಮೂಲಕ ಸರಕಾರದ, ಸಮಾಜದ ಗಮನ ಸೆಳೆದವರು. ಕರ್ನಾಟಕ- ಕೇರಳ ಗಡಿಯ ಚೆಕ್‌ ಪೋಸ್ಟ್್ಗಳಲ್ಲಿ ಪೊಲೀಸರು ಬಕೆಟ್‍ಗಳಲ್ಲಿ ಲಂಚ ಪಡೆಯುವ ಕುಟುಕು ಕಾರ್ಯಾಚರಣೆ ಸಂಚಲನ‌‌ ಉಂಟುಮಾಡಿತ್ತು.
ಇತ್ತೀಚಿನ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಲೇಡೀಸ್ ಟಾಯ್ಲೆಟ್ ಒಳಗೆ ಮೊಬೈಲ್ ಕ್ಯಾಮೆರಾ ಇಟ್ಟ ಕುರಿತು ಮೊಟ್ಟ ಮೊದಲ ಬಾರಿಗೆ ತನಿಖಾ ವರದಿ ಮಾಡಿದ ಕುಂದೇಶ್ವರ ಅವರು, ಇದರ ಪರಿಣಾಮ ಆರೋಪಿ ಸೆರೆಯೊಂದಿಗೆ ವಿವಿಯಲ್ಲಿ ಮಹಿಳೆಯರಿಗೆ ಸಹಿತ ಭದ್ರತೆ ಹೆಚ್ಚಳವಾಗುಂತೆ ಮಾಡಿದ್ದಾರೆ.
ಪತ್ರಕರ್ತರ ಯಕ್ಷಗಾನದಲ್ಲಿ ದೇವಿ‌ ಪಾತ್ರದಲ್ಲಿ‌ ಅಮೋಘ ಅಭಿನಯದ ಮೂಲಕ ಜನ‌ ಮೆಚ್ಚುಗೆ ಗಳಿಸಿದವರು. ಕನ್ನಡ, ತುಳು ಸಿನಿಮಾದಲ್ಲೂ ಪೋಷಕ ಪಾತ್ರ ಮಾಡಿದವರು.