Sunday, January 19, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು: ಸಾರ್ವಜನಿಕ ಶೌಚಾಲಯಕ್ಕೆ0ದು ತೆರಳಿದ್ದ ಹಾವೇರಿ ಮೂಲದ ಯುವತಿ ನಾಪತ್ತೆ – ಕಹಳೆ ನ್ಯೂಸ್

ಮಂಗಳೂರು: ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಕು. ದೀಪಿಕಾ (19) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ವಿವರ
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಗರಾಜ್ ಫಕೀರಪ್ಪ ಅವರಿಗೆ ಮಂಡಿ ನೋವು ಇದ್ದ ಕಾರಣ ತನ್ನ ಮಗಳು ದೀಪಿಕಾ ಜೊತೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜು.1 ರಂದು ರಾತ್ರಿ 9 ಗಂಟೆಗೆ ಹಾನಗಲ್‍ನಿಂದ ಬಸ್‍ನಲ್ಲಿ ಹೊರಟು ಜು.2 ರಂದು ಬೆಳಿಗ್ಗೆ 5 ಗಂಟೆಗೆ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ತಲುಪಿದ್ದರು.

ಈ ವೇಳೆ ಅಲ್ಲೇ ಇದ್ದ ಶೌಚಾಲಯಕ್ಕೆ ನಾಗರಾಜ್ ತೆರಳಿದ್ದು, ಮಗಳು ಸಹ ಹತ್ತಿರದ ಮಹಿಳೆಯರ ಶೌಚಾಲಯಕ್ಕೆ ತೆರಳಿದ್ದಳು.

ಸ್ವಲ್ಪ ಸಮಯದ ನಂತರ ನಾಗರಾಜ್ ಶೌಚಾಲಯದಿಂದ ವಾಪಾಸು ಹೊರಗೆ ಬಂದು ಮಗಳು ದೀಪಿಕಾಳಿಗೆ ತುಂಬಾ ಹೊತ್ತು ಕಾದು ಕುಳಿತರೂ ಬಾರದೇ ಏಕಾಏಕಿ ನಾಪತ್ತೆಯಾಗಿದ್ದಾಳೆ.

ತಕ್ಷಣ ನಾಗರಾಜ್ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಬರ್ಕೆ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.