Sunday, January 19, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರಿನಲ್ಲಿ ನೂತನ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ) ಆರಂಭ: ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ – ಕಹಳೆ ನ್ಯೂಸ್

ಮಂಗಳೂರಿನಲ್ಲಿ ನೂತನವಾಗಿ “ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)” ಆರಂಭಗೊಂಡಿದ್ದು, ಇದರ ಸ್ಥಾಪಕಾಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆಯಾಗಿದ್ದಾರೆ.

ನಗರದ ಕೆಪಿಟಿ ಸರ್ಕಲ್ ನ ಬಳಿಯ ಕದ್ರಿ ಪಾರ್ಕ್ ನಲ್ಲಿರುವ “ಅನಘಾಸ್ ಸ್ಕೇಟಿಂಗ್ ಅಕಾಡೆಮಿ”ಯಲ್ಲಿ ಇತ್ತೀಚೆಗೆ ನಡೆದ ಕ್ಲಬ್ ನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯಾಗಿದ್ದು ಸರ್ವಾನುಮತದಿಂದ ಡಾ.ರಾಜೇಶ್ ಹುಕ್ಕೇರಿ ಅವರನ್ನು ಸ್ಥಾಪಕ ಅಧ್ಯಕ್ಷ ರಾಗಿ ಆಯ್ಕೆ ಮಾಡಲಾಗಿದೆ. ಕ್ಲಬ್ ನ ಉಪಾಧ್ಯಕ್ಷರಾಗಿ ಲಕ್ಷ್ಮೀಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸುಖ್ ಪಾಲ್ ಪೆÇಳಲಿ, ಜೊತೆ ಕಾರ್ಯದರ್ಶಿಯಾಗಿ ಅಖಿಲ್.ಆರ್ ಉಚ್ಚಿಲ್,ಖಜಾಂಚಿಯಾಗಿ ಡಾ.ಅನಿತಾ ರಾಜೇಶ್ ಹಾಗೂ ಸಮಿತಿ ಸದಸ್ಯರಾಗಿ ಯತೀಶ್ ಬೈಕಂಪಾಡಿ, ರವೀಂದ್ರನಾಥ್ ಉಚ್ಚಿಲ್, ರಾಜೇಶ್ ನಾಯರ್, ಡಾ.ಅಕ್ಷತಾ ಚರಣ್ ಆಳ್ವಾ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು