Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋದ ಐವರಲ್ಲಿ ಓರ್ವ ನೀರುಪಾಲು – ಕಹಳೆ ನ್ಯೂಸ್

ಬಂಟ್ವಾಳ: ಈಜಲು ಹೋಗಿರುವ ಐವರಲ್ಲಿ ಓರ್ವ ನೀರುಪಾಲಾಗಿರುವ ದುರ್ಘಟನೆ ಬಂಟ್ವಾಳ ತಾಲೂಕಿನ ಸಜಿಪ ನಡು ಗ್ರಾಮದ ತಲೆಮೊಗರುವಿನ ನೇತ್ರಾವತಿ ನದಿಯಲ್ಲಿ ನಡೆದಿದೆ.

ತಲೆಮೊಗರು ಗ್ರಾಮದ ನಿವಾಸಿ ರುಕ್ಮಯ್ಯ ಎಂಬವರ ಪುತ್ರ ಅಶ್ವಿತ್ ಗಾಣಿಗ(19) ಮೃತಪಟ್ಟ ಯುವಕ.
ತಲೆಮೊಗರು ನಿವಾಸಿ ನಾಗೇಶ್ ಗಾಣಿಗ ಎಂಬವರ ಮನೆಯಲ್ಲಿ ಮಗುವಿಗೆ ನಾಮಕರಣ ಶಾಸ್ತ್ರವಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಅಶ್ವಿತ್ ಗಾಣಿಗ ಬಂದಿದ್ದ. ಸಂಜೆಯ ವೇಳೆಗೆ ಸಂಬಂಧಿಕರಾದ ವಿಶಾಲ್ ಗಾಣಿಗ, ವಿಕಾಸ್ ಗಾಣಿಗ, ಲಿಖಿತ್ ಗಾಣಿಗ, ಹರ್ಷ ಗಾಣಿಗ ಎಂಬವರೊಂದಿಗೆ ಅಶ್ವಿತ್ ಗಾಣಿಗ ಕೂಡಾ ನೇತ್ರಾವತಿ ನದಿಗೆ ಈಜಲೆಂದು ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ನೇತ್ರಾವತಿ ನದಿಯಲ್ಲಿ ಉಬ್ಬರಕ್ಕೆ ಸಿಲುಕಿ ಅಶ್ವಿತ್ ಗಾಣಿಗ ಹಾಗೂ ಹರ್ಷ ಗಾಣಿಗ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೇಳೆ ಉಳಿದವರು ಹರ್ಷ ಗಾಣಿಗನನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಆದರೆ ಅಶ್ವಿತ್ ನೀರುಪಾಲಾಗಿದ್ದು, ಆತನ ಶೋಧ ಕಾರ್ಯ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು