Wednesday, April 2, 2025
ದಕ್ಷಿಣ ಕನ್ನಡಮೈಸೂರುಸುದ್ದಿ

ಲವ್ ಜಿಹಾದ್ ನ ಬಲೆಗೆ ಬಿದ್ದ ಮೈಸೂರು ಮೂಲದ ಯುವತಿ; ವಿಟ್ಲದ ಮುಸ್ಲಿಂ ಯುವಕ ಜುಬೈದ್ ಜೊತೆ ವಿವಾಹವಾದ ಪತ್ರ ವೈರಲ್- ಕಹಳೆ ನ್ಯೂಸ್

ವಿಟ್ಲ: ಅನ್ಯಕೋಮಿನ ಯುವಕನೋರ್ವ ಮೈಸೂರು ಮೂಲದ ಹಿಂದೂ ಯುವತಿಯನ್ನು ವಿವಾಹವಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27) ಎಂಬ ಅನ್ಯಕೋಮಿನ ಯುವಕ ಮೈಸೂರು ಲೋಕನಾಯಕನ ನಗರದ ಸೌಂದರ್ಯ(24) ಎಂಬ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ.

ಉಬೈದ್ ಮತ್ತು ಸೌಂದರ್ಯ ಮೈಸೂರಿನಲ್ಲಿ ರಿಜಿಸ್ಟರ್ ವಿವಾಹವಾಗಿದ್ದು, ಅವರ ಮದುವೆಯ ರಿಜಿಸ್ಟರ್ ಪತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜೋಡಿ ಕೆಲ ದಿನ ಹಿಂದೆ ವಿಟ್ಲದಲ್ಲಿ ತಿರುಗಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಕೇರಳದಲ್ಲಿ ನಿಶ್ಚಿತಾರ್ಥವಾದ ಈ ಅನ್ಯಕೋಮಿನ ಜೋಡಿ ಮೈಸೂರಿನ ರೆಜಿಸ್ಟರ್ ಆಫೀಸ್ ನಲ್ಲಿ ವಿವಾಹವಾಗಿದ್ದಾರೆ.

ಅಷ್ಟೇ ಅಲ್ಲದೇ ಇದೇ ತಿಂಗಳು ಹಾಲ್ ಒಂದರಲ್ಲಿ ರಿಸೆಪ್ಶನ್ ಕೂಡ ನಡೆಸಲು ತಯಾರಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯುವತಿಯ ಮನೆಯವರ ಒಪ್ಪಿಗೆ ಮೇರೆಗೆ ಈ ವಿವಾಹ ನಡೆದಿದೆ ಎಂಬ ಮಾಹಿತಿಯೂ ಕೊಡ ಲಭ್ಯವಾಗಿದೆ.

ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ. ಹಿಂದೂ ಯುವತಿಯರನ್ನು ಪ್ರೀತಿಯ ಮೂಲಕ ತಮ್ಮ ಬಲೆಗೆ ಹಾಕಿಕೊಂಡು, ಮದುವೆಯಾಗುವ ಮೂಲಕ ಮತಾಂತರ ಮಾಡಿ ಅವರನ್ನು ಹಿಂದೂ ಧರ್ಮದಿಂದ ಅನ್ಯಮತಕ್ಕೆ ಮತಾಂತರ ಮಾಡುವ ದುರುದ್ದೇಶ ಹೊಂದಿದ್ದು, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ