Sunday, January 19, 2025
ಸುದ್ದಿ

ಅಸ್ತಿತ್ವಂ ಪ್ರತಿಷ್ಠಾನದ ನೇತೃತ್ವದ ” ನಶಾ ಮುಕ್ತಿ ” ಸಮಾಜ ಜಾಗೃತಿ ಕಾರ್ಯಾಗಾರಕ್ಕೆ ಕುಂಟಾರು ರವೀಶ ತಂತ್ರಿಗಳಿಂದ ಚಾಲನೆ ; ವಿದ್ಯಾರ್ಥಿಗಳಗೆ ದಿಶಾ ಶೆಟ್ಟಿಯವರಿಂದ ಜಾಗೃತಿಯ ಪಾಠ – ಕಹಳೆ ನ್ಯೂಸ್

ಕುಂಟಾರು : ಅಸ್ತಿತ್ವಂ ಪ್ರತಿಷ್ಠಾನದ ನಶಾ ಮುಕ್ತಿ ಕಾರ್ಯಕ್ರಮಕ್ಕೆ ಮುಳ್ಳೇರಿಯಾದ ವಿದ್ಯಾಶ್ರೀ ವಿದ್ಯಾಸಂಸ್ಥೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಚಾಲನೆ ನೀಡಿದರು.

ಸಮಾಜದ ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು
ಅವರನ್ನು ದೇಶಕಾರ್ಯದಲ್ಲಿ ತೊಡಗಿಸುವ ಸಂಕಲ್ಪ ಹಾಗೂ
ಯುವಜನಾಂಗಕ್ಕೆ ಮಾರಕವಾಗಿರುವದೇಶದ ಅಭಿವೃದ್ಧಿಗೂ ತೊಡಕಾದ
ಮಾದಕ ದ್ರವ್ಯಗಳ ಸೇವನೆಯ ವಿರುದ್ಧ ಅರಿವು ಮೂಡಿಸುವ ಉದ್ದೇಶದೊಂದಿಗೆ
ಕರ್ನಾಟಕದ ಕರಾವಳಿಯ ನಾಲ್ಕು ತಾಲೂಕುಗಳು
ಹಾಗೂ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಶಾಲಾ
ಕಾಲೇಜುಗಳಲ್ಲಿ ಕಾರ್ಯಗಾರ ನಡೆಸಲು ಉದ್ದೇಶಿಸಿದ ಈ ಕಾರ್ಯಕ್ರಮದ ಅಂಗವಾಗಿ ಭಾರತೀಯ ಸೈನ್ಯದ ವಿಚಾರದಲ್ಲಿ
ಅರಿವು ಮೂಡಿಸುವ ಸೇನಾಸ್ಪೂರ್ತಿ ಹಾಗೂ ಮಾದಕ ದ್ರವ್ಯಗಳ
ಸೇವನೆ ವಿರುದ್ಧ ಅರಿವು ಮೂಡಿಸುವ ನಶಾಮುಕ್ತಿ ಎಂಬ
ಕಾರ್ಯಗಾರಗಳ ಉದ್ಘಾಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತಾನಾಡಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಸಮಾಜದ ಜಾಗೃತಿ ಮೂಡಿಸುವ ಸಲುವಾಗಿ ಅಸ್ತಿತ್ವಂ ಪ್ರತಿಷ್ಠಾನ ಈ ಜಾಗೃತಿ ಕಾರ್ಯಕ್ರಮ ಕೈಗೆತ್ತಿಕೊಂಡಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಕರಾವಳಿ ಭಾಗದ ಹಲವು ಶಾಲಾ ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.


ಮುಖ್ಯ ಅತಿಥಿ ಆಗಮಿಸಿದ ಕಹಳೆ ನ್ಯೂಸ್ ನ ಪ್ರ.ಸಂಪಾದಕರಾದ ಶ್ಯಾಮ ಸುದರ್ಶನ ಭಟ್ ಹೋಸಮೂಲೆ ಮಾತನಾಡಿ ಸಮಾಜದಲ್ಲಿ ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸುವುದ ಅತ್ಯಂತ ಅವಶ್ಯಕ ಈ ನಿಟ್ಟಿನಲ್ಲಿ ಕರಾವಳಿಯ ಭಾಗದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಸಂಘಟಿತವಾಗಿರುವುದು ಉತ್ತಮ ಸಂಗತಿ ಎಂದರು.

ಕಾರ್ಯಗಾರಗಳ ಸಂಪನ್ಮೂಲ ವ್ಯಕ್ತಿಗಳಾಗಿರುವ ‘ ಕಲಾರತ್ನ’ ಕು. ದಿಶಾ ಸಿ. ಶೆಟ್ಟಿ ಕಟ್ಲ ಹಾಗೂ ರಾಜನ್ ಮುಳಿಯಾರ್ ಮಕ್ಕಳಿಗೆ ಶಿಭಿರ ನಡೆಸಿದರು.

ಕಾರ್ಯಕ್ರಮದಲ್ಲಿ ಅಸ್ತಿತ್ವಂ ಪ್ರತಿಷ್ಠಾನದ ಮುಖ್ಯಸ್ಥರಾಗಿ ಮಂಜುನಾಥ ಉಡುಪ ಕುಂಟಾರು, ವಿದ್ಯಾಶ್ರೀ ವಿದ್ಯಾಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು.