Tuesday, January 28, 2025
ಸುದ್ದಿ

ಕಾರ್ಕಳ: ಸಿನಿಮೀಯ ಶೈಲಿಯಲ್ಲಿ ಚೇಸ್ : ದನಕಳ್ಳರನ್ನು ಹೆಡೆಮುರಿ ಕಟ್ಟಿದ ಹೆಬ್ರಿ ಪೊಲೀಸರು – ಕಹಳೆ ನ್ಯೂಸ್

ಹೆಬ್ರಿ: ದನಗಳನ್ನು ಕದಿಯುತ್ತಿದ್ದ ಇಬ್ಬರು ದನಕಳ್ಳರನ್ನು ಪೊಲೀಸರು ಬಂಧಿಸಿದ ಘಟನೆ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ಗೋವುಗಳನ್ನು ಶಿಫ್ಟ್ ಕಾರಿನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಬೆನ್ನಟ್ಟಿದ ಪೊಲೀಸರು ಶಕೀಲ್ ಅಹಮದ್ ಮತ್ತು ಅಖಿಲ್ ಅಹಮದ್ ಎಂಬ ಇಬ್ಬರು ಸಹೋದರರನ್ನು ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ. ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿಸಿದ ಪರಿಣಾಮ ಒಂದು ಗೋವಿನ ಕುತ್ತಿಗೆ ಮುರಿದು ಸಾವನ್ನಪಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಕಳದ ಹೆಬ್ರಿ ಕೆರೆಬೆಟ್ಟು ಪರಿಸರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಬ್ರಿ ಪೊಲೀಸರು ಕಾರಿನ ಚಕ್ರಕ್ಕೆ ಶೂಟ್ ಮಾಡಿ ಸಿನಿಮೀಯ ಶೈಲಿಯಲ್ಲಿ ಆರೋಪಿಗಳನ್ನು ಚೇಸ್ ಮಾಡಿ ಹೆಡೆಮುರಿ ಕಟ್ಟಿದ್ದಾರೆ.

ಆರೋಪಿಗಳು ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ತಲ್ವಾರು ತೋರಿಸಿ ದನ ಕದಿಯುತ್ತಿದ್ದು, ಉಡುಪಿಯ ಮಲ್ಪೆ ಹೂಡೆಯಲ್ಲಿ ಅಕ್ರಮ ಕಸಾಯಿ ಖಾನೆ ನಡೆಸುತ್ತಿದ್ದರು.

ಎಸ್ ಐ ಸುದರ್ಶನ್ ದೊಡ್ಡಮನಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿದ್ದು, ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.