Recent Posts

Monday, January 27, 2025
ಸುದ್ದಿಸುಳ್ಯ

ಸುಳ್ಯ : ಜುಲೈ 10 ರಂದು ನಡೆಯಲಿದೆ ದ್ವಿತೀಯ ವರ್ಷದ ಹಿಂದು ಬಾಂಧವರ ಕೆಸರ್‌ಡ್ ಒಂಜಿ ದಿನದ ಗೊಬ್ಬು – ಕಹಳೆ ನ್ಯೂಸ್

ಸುಳ್ಯ : ವಿಶ್ವ ಹಿಂದು ಪರಿಷದ್ ಬಜರಂಗದಳ, ಜೈ ಹನುಮಾನ್ ಶಾಖೆ ಗಾಂಧಿನಗರ, ಸುಳ್ಯ ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಹಿಂದು ಬಾಂಧವರ ಕೆಸರ್‌ಡ್ ಒಂಜಿ ದಿನದ ಗೊಬ್ಬು ಕಾರ್ಯಕ್ರಮ ಜುಲೈ 10ರಂದು ಬೆಳಿಗ್ಗೆ 9 ಗಂಟೆಗೆ, ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು, ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯ ಇದರ ಅನುವಂಶಿಕ ಆಡಳಿತ ಮುಕ್ತೇಸರರಾದ ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದಾರೆ. ಗಾಂಧಿನಗರ ಜೈ ಹನುಮಾನ್ ಶಾಖೆ ವಿ.ಹಿ.ಪ.ಅಧ್ಯಕ್ಷರಾದ ಸೋಮಶೇಖರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಗೋಪಾಲ ನಡುಬೈಲು, ನವೀನ್ ನೆರಿಯ, ರಂಜಿತ್, ಅರವಿಂದ ಸುಳ್ಯ, ಸಂದೀಪ್ ವಳಲಂಬೆ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ. ವಿ.ಹಿ.ಪ ಸುಳ್ಯ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ ಪೈಕ ಅವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತಡ್ಕ ಅವರು ದಿಕ್ಸೂಚಿ ಬಾಷಣ ಮಾಡಲಿದ್ದಾರೆ. ಇನ್ನೂ ಕಾರ್ಯಕ್ರಮದಲ್ಲಿ, ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಳಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು