Sunday, January 26, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಅವರಿಂದ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಶೇಷಪ್ಪರವರ ಮನೆಗೆ ತಡೆಗೋಡೆ ನಿರ್ಮಾಣಕ್ಕೆ ಸಹಾಯಹಸ್ತದ ಭರವಸೆ – ಕಹಳೆ ನ್ಯೂಸ್

ಬಂಟ್ವಾಳ : ವಿಟ್ಲಮುಡ್ನೂರು ಗ್ರಾಮದ ಪಿಲಿಂಜ ಹರಿಜನ ಕಾಲೋನಿ ನಿವಾಸಿ ಶೇಷಪ್ಪ ನಲಿಕೆ ಎಂಬವರ ಮನೆಯು ವೀಪರೀತ ಮಳೆಗೆ ಮನೆಯ ಎಡ ಭಾಗವು ಕುಸಿದಿದ್ದು ಮನೆಯು ಕೂಡ ಕುಸಿಯುವ ಹಂತದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತೀರ ಬಡವರಾದ ಇವರು ಮನೆಯು ಕುಸಿದಲ್ಲಿ ವಾಸಿಸಲು ಮನೆಯಿಲ್ಲದೆ ಸಂಕಷ್ಟ ಪಡುವ ಪರಿಸ್ಥಿತಿಯಲ್ಲಿದ್ದಾರೆ. ಈ ವಿಚಾರವನ್ನು ಸ್ಥಳಿಯರಾದ ಎಲ್ಯಣ್ಣ ಪೂಜಾರಿಯವರು ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ತಿಳಿಸಿದಾಗ ಕೂಡಲೆ ಅವರ ಮನೆಗೆ ಖುದ್ದು ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಮನೆಯ ಪಕ್ಕದಲ್ಲಿ ಸಣ್ಣ ನೀರಿನ ತೋಡು ಹರಿಯುತ್ತಿದ್ದು ಇದರಿಂದಾಗಿ ಮಣ್ಣು ಕುಸಿದಿರುತ್ತದೆ. ಮನೆಯು ಕುಸಿಯದಂತೆ ರಕ್ಷಣೆಗೆ ತಡೆಗೋಡೆ ನಿರ್ಮಾಣ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು ಮತ್ತು ತಡೆಗೋಡೆ ನಿರ್ಮಾಣ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಎಲ್ಯಣ್ಣಪೂಜಾರಿ ಹಲಸಿನ ಕಟ್ಟೆ , ಲೋಹಿತ್ ಪಿಲಿಂಜ , ವೀರಪ್ಪ ಪೂಜಾರಿ ಬದಿಗುಡ್ಡೆ , ಶ್ರೀನಿವಾಸ ಪೂಜಾರಿ ಬಡಿಗುಡ್ಡೆ , ನಾರಾಯಣ ಪೂಜಾರಿ ಬದಿಗುಡ್ಡೆ , ಸಂದೀಪ್ ಪಿಲಿಂಜ , ಪ್ರಜ್ವಲ್ ಪಿಲಿಂಜ , ಪೂವಪ್ಪ ಕುಕ್ಕುದಡ್ಕ , ಶಶೀಧರ್ ಕಳುವಾಜೆ, ಜಗನಾಥ ಮೂಲ್ಯ , ಕ್ರಷ್ಣ ಗೌಡ ಪಿಲಿಂಜ , ಚಂದ್ರ ಗೌಡ ಪಿಲಿಂಜ , ಚಂದ್ರಹಾಸ ಹಲಸಿನಕಟ್ಟೆ , ತಾರಾನಾಥ ಪಿಲಿಂಜ , ಸತೀಶ್ ಪೂಜಾರಿ ಪಿಲಿಂಜ , ರಾಮಣ್ಣ ಪಿಲಿಂಜ , ಕುಜುಂಬ ನಲಿಕೆ ಮುಂತಾದವರು ಉಪಸ್ಥಿತರಿದ್ದರು.