Saturday, January 25, 2025
ಸುದ್ದಿ

ಇಡಿ ಬಳಿಕ ಎಸಿಬಿ ಶಾಕ್: ಜಮೀರ್ ಅಹಮದ್ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ – ಕಹಳೆ ನ್ಯೂಸ್

ಬೆಂಗಳೂರು: ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಇಡಿ ಬಳಿಕ ಈಗ ಎಸಿಬಿ ಶಾಕ್ ಎದುರಾಗಿದೆ.
ಬೆಳ್ಳಂಬೆಳಗೆಯೇ ಜಮೀರ್ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಈ ಸಂಬಂಧ ಎಸಿಬಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಜಾರಿ ನಿರ್ದೇಶನಾಲಯ ನೀಡಿದ ವರದಿ ಅನ್ವಯ ದಂಡು ರೈಲ್ವೆ ನಿಲ್ದಾಣ ಸಮೀಪದ ಜಮೀರ್ ನಿವಾಸ, ಸಿಲ್ವರ್ ಓಕ್ ಅಪಾರ್ಟ್ ಮೆಂಟ್, ಸದಾಶಿವನಗರ ಗೆಸ್ಟ್ ಗೌಸ್, ಬನಶಂಕರಿಯಲ್ಲಿರುವ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಶನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಮೀರ್ ನಿರ್ಮಿಸಿರುವ ಮನೆ ಬಗ್ಗೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಈ ಹಿಂದೆ ದಾಳಿ ನಡೆಸಲಾಗಿತ್ತು. ಈ ಭವ್ಯ ಬಂಗಲೆಯ ಇಂಟೀರಿಯರ್ ಡಿಸೈನ್ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು