ಲಕ್ನೋ: ಹಿಂದೂ ದೇವರುಗಳ ಫೋಟೋವಿರುವ ಪೇಪರ್‌ನಲ್ಲಿ ಕತ್ತರಿಸಿದ ಕೋಳಿ ಮಾಂಸವನ್ನು ಕಟ್ಟಿ ಮಾರಾಟ ಮಾಡುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್‍ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಾಲಿಬ್ ಹುಸೇನ್ ತನ್ನ ಅಂಗಡಿಯಲ್ಲಿ ಹಿಂದೂ ದೇವತೆಯ ಫೋಟೋವಿರುವ ಪೇಪರ್‌ಗಳನ್ನು ತುಂಡು, ತುಂಡುಗಳಾಗಿ ಮಾಡಿ, ಅದರಲ್ಲಿ ಕತ್ತರಿಸಿದ ಕೋಳಿ ಮಾಂಸವನ್ನು ಕಟ್ಟಿ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕೆಲವು ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೆ ಚಾಕುವಿನಿಂದ ಕೊಲ್ಲಲು ಹುಸೇನ್ ಮುಂದಾಗಿದ್ದಾನೆ ಎಂದು ಎಫ್‍ಐಆರ್ ತಿಳಿಸಲಾಗಿದೆ. ಇದೀಗ ಹುಸೇನ್ ವಿರುದ್ಧ ಐಪಿಸಿ ಸೆಕ್ಷನ್ 153-ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ಧರ್ಮ ಅಥವಾ ಉದ್ದೇಶದಿಂದ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಮತ್ತು 307 (ಕೊಲೆಯ ಪ್ರಯತ್ನ)ಗಳ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.