Sunday, January 19, 2025
ಸುದ್ದಿ

“ಆತ್ಮಜ್ಞಾನದ ಸಂಪತ್ತು ಆತ್ಯಂತ ಉನ್ನತವಾದ ಸಂಪತ್ತು” ಪ್ರಗತಿ ಸ್ಟಡಿ ಸೆಂಟರ್‍ನ ನೂತನ ವಿಜ್ಞಾನ ವಿಭಾಗವನ್ನು ಉದ್ಘಾಟಿಸಿ ಒಡಿಯೂರು ಸ್ವಾಮೀಜಿ ಅಭಿಮತ – ಕಹಳೆ ನ್ಯೂಸ್

ಪುತ್ತೂರು: “ವಿಜ್ಞಾನ ಮತ್ತು ಆಧ್ಯಾತ್ಮ ಒಂದಕ್ಕೊಂದು ಪೂರಕವಾಗಿದೆ. ಒಂದರಿಂದ ಅನುಭವವನ್ನು ಪಡೆದರೆ ಇನ್ನೊಂದರಿಂದ ಅನುಭಾವವನ್ನು ಪಡೆಯಬಹುದು. ಸಂಸ್ಕøತಿಯ ಉಳಿವಿಗಾಗಿ ಶಿಕ್ಷಣದ ಜೊತೆಗೆ ಆಧ್ಯಾತ್ಮದ ಪಾಠವನ್ನು ಭೋಧಿಸಬೇಕಾಗಿದೆ. ಆತ್ಮಜ್ಞಾನದ ಸಂಪತ್ತು ಆತ್ಯಂತ ಉನ್ನತವಾದ ಸಂಪತ್ತು ನೈತಿಕ ಪ್ರಜ್ಞೆಯಿರುವ ಶಿಕ್ಷಣ ಎಲ್ಲಿ ಇರುತ್ತದೋ ಅಲ್ಲಿ ಸಂಸ್ಕøತಿ ಬೆಳೆಯುತ್ತದೆ. ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ಮತಿ ವೃದ್ಧಿಯಾಗಬೇಕು” ಎಂದು ಪೂರ್ಣ ಕುಂಭ ಸ್ವಾಗತದೊಂದಿಗೆ ಆಗಮಿಸಿದ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಾದದೊಂದಿಗೆ ಪುತ್ತೂರಿನ ಬೊಳ್ವಾರು ಜಿ.ಎಲ್.ಟ್ರೇಡ್ ಸೆಂಟರ್‍ನ ಮೂರನೇ ಮಹಡಿಯಲ್ಲಿ ಪ್ರಗತಿ ಸ್ಟಡಿ ಸೆಂಟರ್‍ನ ನೂತನ ವಿಜ್ಞಾನ ವಿಭಾಗವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‍ನ ಮಾಲೀಕರಾದ ಬಲರಾಮ್ ಆಚಾರ್ಯ ಮಾತನಾಡಿ, “ಶಿಕ್ಷಣದಲ್ಲಿ ಶಿಸ್ತಿರಬೇಕು. ನೈತಿಕತೆಗೆ ಒತ್ತುಕೊಡಬೇಕು, ಶಿಸ್ತು ಸಂಯಮವನ್ನು ರೂಪಿಸಿಕೊಳ್ಳುವಲ್ಲಿ ಪ್ರಗತಿ ಸೆಂಟರ್ ಸತತವಾಗಿ ಶ್ರಮಿಸುತ್ತಿದೆ ಇಂದಿನ ವಿಜ್ಞಾನವೇ ನಾಳಿನ ತಂತ್ರಜ್ಞಾನ” ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ಡಿ.ಎಂ ಪಿ.ಯು ಕಾಲೇಜಿನ ಪ್ರಾಂಶುಪಾಲರು ಎನ್. ದಿನೇಶ್ ಚೌಟ ಮಾತನಾಡಿ, “ಯಾರು ಶಿಸ್ತಿಗಾಗಿ, ಶಿಸ್ತಿನಿಂದ ಕೆಲಸಮಾಡುತ್ತಾರೋ ಅವರು ವಿಜಯಿಯಾಗುತ್ತಾರೆ. ಆಲಿಸುವಿಕೆ ಮತ್ತು ಕೇಳುವಿಕೆಯ ಮಧ್ಯದ ವ್ಯತ್ಯಾಸವನ್ನಾರಿತುಕೊಂಡಾಗ ಮಾತ್ರ ಒಬ್ಬ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ” ಎಂದು ನುಡಿದರು.


ಅತಿಥಿಗಳಾಗಿ ಭಾಗವಹಿಸಿದ್ದ ವಿಕಾಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಫ್ರೋ. ರಾಜರಾಮ್ ರಾವ್ ಟಿ ಮಾತನಾಡಿ, “ಸಿಕ್ಕಿದಂತಹ ವಿದ್ಯೆಯಿಂದ ಅಂತರಾತ್ಮವನ್ನು ಅರಿಯಬೇಕು. ವಿಜ್ಞಾನ ವಿಭಾಗವನ್ನು ಆರಿಸಿಕೊಳ್ಳುವುದೆಂದರೆ ಸನ್ಯಾಸಿ ಜೀವನದ ಹಾಗೇ ಕಲಿಕೆಯೊಂದೇ ಧ್ಯೇಯವಾಗಿರಬೇಕು. ಸಿಗದಿರುವ ವಸ್ತುಗಳನ್ನು ಯಾವಾಗ ಗುರುತಿಸುತ್ತೇವೋ ಅದೇ ವಿಜ್ಞಾನ, ಗುರುತಿಸುವವನೇ ವಿಜ್ಞಾನಿ” ಎಂದು ನುಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಸೈಂಟ್ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಮಾಲಿನಿ ಕೆ ಮಾತನಾಡಿ, “ನಿಮಗೆ ಯಶಸ್ಸು ಸಿಗಬೇಕಾದರೆ ನುರಿತ ಭೋದಕವೃಂದ, ವಿದ್ಯಾರ್ಥಿಮಿತ್ರ, ಉತ್ತಮ ಪರಿಸರ ಇರಬೇಕು ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಹೊಂದಿ ಅದರತ್ತ ಗಮನಹರಿಸಿದಾಗ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ. ಅದಕ್ಕೆ ಪ್ರಗತಿ ಸ್ಟಡಿ ಸೆಂಟರ್ ನೈಜ ಉದಾಹರಣೆ ಎಂದು ಹೇಳಿದರು.


ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಡಾ. ಪ್ರಸನ್ನ ರೈ ಕೆ ಮಾತಾನಾಡಿ “ಪ್ರಗತಿ ಸ್ಟಡಿ ಸೆಂಟರ್ ಪ್ರವಾಹದಲ್ಲಿ ಈಜುವಂತಹ ಕೆಲಸವನ್ನು ಮಾಡಿದೆ. ಜ್ಞಾನ ವ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಂತಹ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿ ತನ್ನ ತೆಕ್ಕೆಯಲ್ಲಿ ಹಿಡಿದು ಮೇಲಕ್ಕೆತ್ತುತ್ತಿದ್ದಾರೆ. ಪ್ರಗತಿಯ ಪಥದಲ್ಲಿ ಮಾಲಿನ್ಯ ಎನ್ನುವುದು ತಪ್ಪಿಸಲಾರದ ಘಟನೆ ನಂತರ ಎಚ್ಚೆತ್ತುಕೊಳ್ಳುವುದೇ ನಿಜವಾದ ಬದುಕು ಎಂದು ನುಡಿದರು.

ಮತ್ತೋರ್ವ ಅತಿಥಿ ಮಂಗಳೂರು ವಿಶ್ವ ವಿದ್ಯಾನಿಲಯದ ಫೈನಾನ್ಸ್ ವಿಭಾಗದ ದಿನೇಶ್ ಭಟ್ ಶುಭ ಹಾರೈಸಿದರು. ಮದ್ಯಾಹ್ನದ ಭೋಜನದ ನಂತರ ಕುದ್ಕಡಿ ವಿಶ್ವನಾಥ್ ರೈ ಮತ್ತು ನಯನಾ ವಿ. ರೈ ವಿದ್ಯಾರ್ಥಿಗಳಿಂದ ‘ನೃತ್ಯಾಧಾರಾ’ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಪಿ. ವಿ. ಗೋಕುಲ್‍ನಾಥ್ ಮತ್ತು ಪ್ರಾಂಶುಪಾಲರಾದ ಕೆ. ಹೇಮಲತಾ ಉಪಸ್ಥಿತರಿದ್ದರು. ಸಂಚಾಲಕ ಪಿ. ವಿ. ಗೋಕುಲ್‍ನಾಥ್ ಸ್ವಾಗತಿಸಿ, ಉಪನ್ಯಾಸಕಿ ತನುಜಾಕ್ಷಿ ವಂದಿಸಿದರು. ಪ್ರೋ. ರಾಮಚಂದ್ರ ಭಟ್ ನಿರೂಪಿಸಿದರು.

ಚಲಿಸುವ ಜ್ಞಾನ ಭಂಡಾರ ಎಂದೇ ಜನಜನಿತವಾಗಿರುವ ಬೆಂಗಳೂರಿನ ವೇ|| ಬ್ರ|| ಶ್ರೀ ವಿದ್ವಾನ್ ಕೆ.ಜಿ ಸುಬ್ರಾಯ ಶರ್ಮಾಜೀರವರ ಪ್ರಪ್ರಥಮ ಪುತ್ತೂರಿನ ಭೇಟಿ ಸಂದರ್ಭದಲ್ಲಿ ಅವರ ಮುಖಾರವಿಂದದಿಂದ ಮೂಡಿ ಬಂದ ಅಮೂಲ್ಯ ಸ್ರೋತ್ರ ರತ್ನ ಮಹತೋಭಾರ ಮಹಾಲಿಂಗೇಶ್ವರಾಷ್ಟಕಮ್‍ನ್ನು ಪ್ರಪ್ರಥಮ ಬಾರಿಗೆ ಪ್ರಗತಿ ಸ್ಟಡಿ ಸೆಂಟರ್‍ನ ಸಂಚಾಲಕರಾದ ಪಿ.ವಿ.ಗೋಕುಲ್‍ನಾಥ್‍ರವರು ಪ್ರತಿಯೊಬ್ಬರು ಈ ಸ್ತೋತ್ರವನ್ನು ದಿನನಿತ್ಯ ಪಾರಾಯಣ ಮಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಕೃಪೆಗೆ ಪಾತ್ರರಾಗಬೇಕೆನ್ನುವ ಬೃಹದಾಸೆಯೊಂದಿಗೆ ಹತ್ತು ಸಾವಿರ ಪ್ರತಿಗಳನ್ನು ಈವರೆಗೆ ಹಂಚಿದ್ದಾರೆ. ಇದೇ ಸ್ತೋತ್ರವನ್ನು ನೃತ್ಯರೂಪದಲ್ಲಿ ವಿಜ್ಞಾನ ವಿಭಾಗದ ಉದ್ಘಾಟನೆಯ ದಿನದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದರು.