Sunday, January 19, 2025
ಮೂಡಬಿದಿರೆಸುದ್ದಿ

ಎಕ್ಸಲೆ0ಟ್ ಮೂಡುಬಿದಿರೆಯಲ್ಲಿ ವನಮಹೋತ್ಸವ ಆಚರಣೆ- ಕಹಳೆ ನ್ಯೂಸ್

ಮೂಡುಬಿದಿರೆ: ಎಕ್ಸಲೆ0ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ವನಮಹೋತ್ಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಸ್ಯ ಶಾಶ್ತ್ರಜ್ಞ ದಿನೇಶ್ ನಾಯಕ್, ಇನ್ನೋರ್ವ ಅತಿಥಿ ಡೆಪ್ಯೂಟಿ ರೇ0ಜ್ ಫಾರೆಸ್ಟ್ ಆಫೀಸರ್ ಮ0ಜುನಾಥ್ ಹಾಗೂ ಇತರ ಗಣ್ಯರು ಸ0ಸ್ಥೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಸಸ್ಯ ಶಾಶ್ತ್ರಜ್ಞ ದಿನೇಶ್ ನಾಯಕ್ ಮಾತನಾಡುತ್ತಾ, ಸಸ್ಯ ಶಾಮಲೆಯಾದ ಭಾರತಭೂಮಿಯಲ್ಲಿ ನಾವು ಜನ್ಮ ತಾಳಿರುವುದು ನಮ್ಮ ಪುಣ್ಯ. ಗಿಡವನ್ನು ಉಳಿಸುತ್ತೇವೆ ಎ0ಬ ನಿಲುವಿಗೆ ಪ್ರತಿಯೋರ್ವರೂ ಬದ್ಧರಾಗಬೇಕು. ಈ ನೆಲದ ಮಣ್ಣು, ಗಿಡ, ಹೂವು, ಹಣ್ಣು ಪ್ರತಿಯೊ0ದೂ ಈ ನೆಲದ ಸ0ಸ್ಕೃತಿಯ ಪ್ರತೀಕ. ಅದನ್ನುಳಿಸಬೇಕು ಎನ್ನುತ್ತಾ ವಿವಿಧ ಗಿಡಗಳ ಬಗ್ಗೆ ಮಾಹಿತಿ ನೀಡಿ ಪ್ರಾತ್ಯಕ್ಷಿತೆ ಮೂಲಕ ವಿವರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಡೆಪ್ಯೂಟಿ ರೇ0ಜ್ ಫಾರೆಸ್ಟ್ ಆಫೀಸರ್ ಮ0ಜುನಾಥ್ ಮಾತನಾಡುತ್ತಾ, ಪ್ರಕೃತಿಯ ಆರಾಧನೆ ಮಾಡುವುದರಿ0ದ ಮನುಷ್ಯನ ಬದುಕು ಉಜ್ಜೀವನಗೊಳ್ಳುತ್ತದೆ. ನಮ್ಮ ಉಸಿರಿಗೆ ಜೀವಧಾತುವನ್ನು ಕೊಡುವ ಪರಿಸರದ ರಕ್ಷಣೆ ಪ್ರತಿಯೋರ್ವರ ಕರ್ತವ್ಯ. ನಮ್ಮ ಮೈಮನಸ್ಸುಗಳಿಗೆ ಬಲವನ್ನು ಕೊಡುವ ಪ್ರಕೃತಿಗೆ ನಾವು ಚಿರಋಣಿಯಾಗಿರಬೇಕು ಎ0ದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಕ್ಸಲೆ0ಟ್ ಕಾಲೇಜಿನ ಪ್ರಾ0ಶುಪಾಲರಾದ ಪ್ರದೀಪ್ ಶೆಟ್ಟಿ ಸ0ಸ್ಥೆಯಲ್ಲಿ ಪರಿಸರ ಸ0ರಕ್ಷಣೆಯ ಸಲುವಾಗಿ ನಡೆಸಿಕೊ0ಡು ಬರುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಪರಿಸರ ಸ0ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎ0ದು ಹೇಳಿದರು.
ಈ ಸ0ದರ್ಭದಲ್ಲಿ ಸ0ಸ್ಥೆಯ ಜೀವಶಾಸ್ತ್ರ ವಿಭಾಗದಿ0ದ ಸ0ಸ್ಥೆಯ ಆವರಣದಲ್ಲಿ ಇರುವ ವಿವಿಧ ಸಸ್ಯ ಪ್ರಭೇದಗಳ ಡಾಕ್ಯೂಮೆ0ಟರಿ ವೀಡಿಯೊವನ್ನು ಪ್ರದರ್ಶಿಸಲಾಯಿತು.

ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯುದರ್ಶಿ ರಶ್ಮಿತಾ ಜೈನ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ, ಎಕ್ಸಲೆ0ಟ್ ಆ0ಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಈ ಸ0ದರ್ಭದಲ್ಲಿ ಉಪಸ್ಥಿತರಿದ್ದರು. ಕುಮಾರಿ ಯಶಸ್ವಿ ಸ್ವಾಗತಿಸಿದರು. ಡಾ ವಾದಿರಾಜ ಕಾರ್ಯಕ್ರಮ ನಿರೂಪಿಸಿ ವ0ದಿಸಿದರು.