Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಹಾರಾಡಿಯಲ್ಲಿ ರಸ್ತೆದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ವ್ಯಕ್ತಿ ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಹಾರಾಡಿಯಲ್ಲಿ ರಸ್ತೆದಾಟುತ್ತಿದ್ದ ವ್ಯಕ್ತಿಗೆ ಆಲ್ಟೊ ಕಾರ್ ಒಂದು ಡಿಕ್ಕಿ ಹೊಡೆದು

ಪಾದಚಾರಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ರಾತ್ರೆಯ ವೇಳೆಗೆ ರಸ್ತೆದಾಟುತ್ತಿದ್ದ ಹಾವೇರಿ ಮೂಲದ ವ್ಯಕ್ತಿಗೆ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಆಲ್ಟೊ ಕಾರೊಂದು ಡಿಕ್ಕಿ ಹೊಡೆದಿದ್ದು ದಿಕ್ಕಿಯ ರಭಸಕ್ಕೆ ವ್ಯಕ್ತಿಯ ಕಾಲಿಗೆ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯು ಹಾವೇರಿ ಮೂಲದವನ್ನಾಗಿದ್ದು ಪುತ್ತೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು