ನೂಪುರ್ ಶರ್ಮಾ ಬೆಂಬಲಿಸಿದ ಮತ್ತೊಬ್ಬ ಹಿಂದೂ ಮೇಲೆ ಅಟ್ಯಾಕ್ : 20 ಕ್ಕೂ ಹೆಚ್ಚು ಮುಸ್ಲಿಂ ಯುವಕರಿಂದ ದಾಳಿ – ಕಹಳೆ ನ್ಯೂಸ್
ಪಾಟ್ನಾ : ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಕಾರಣಕ್ಕೆ ಮತ್ತೊಂದು ದಾಳಿ ನಡೆದಿದೆ. ಬಿಹಾರದ ಭೋಜ್ಪುರ್ ಜಿಲ್ಲೆಯಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದ ಹಿಂದೂ ಯುವಕ ದೀಪಕ್ ಮೇಲೆ ಭೀಕರ ದಾಳಿ ನಡೆದಿದೆ.
20 ಮುಸ್ಲಿಮ್ ಯುವಕರು ಟಿ ಸ್ಟಾಲ್ಗೆ ಆಗಮಿಸಿ ಹಲ್ಲೆ ನಡೆಸಿದ್ದಾರೆ.
ದೀಪಕ್ ಟೀ ಸ್ಟಾಲ್ ಪಕ್ಕದಲ್ಲೇ ರಾಯೀಸ್ ಅನ್ನೋ ಮುಸ್ಲಿಮ್ ಯುವಕ ವ್ಯಾಪಾರ ಮಾಡುತ್ತಿದ್ದ. ದೀಪಕ್ ಫೇಸ್ಬುಕ್ನಲ್ಲಿ ಐ ಸಪೂರ್ಟ್ ನೂಪುರ್ ಶರ್ಮಾ ಅನ್ನೋ ಪೋಸ್ಟ್ ಹಾಕಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಯೀಸ್, ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಕೇಳುವಂತೆ ಸೂಚಿಸಿದ್ದ. ಆದರೆ ಸೂಚನೆ ನಿರ್ಲಕ್ಷ್ಯಿಸಿದ್ದ ದೀಪಕ್ಗೆ ತಕ್ಕ ಪಾಠ ಕಲಿಸಲು ರಾಯೀಸ್ ಇತರ ಮುಸ್ಲಿಮ್ ಯುವಕರಿಗೆ ಮಾಹಿತಿ ನೀಡಿದ್ದಾನೆ.
20 ಮುಂದಿ ಮುಸ್ಲಿಮ್ ಯುವಕರು ನೇರವಾಗಿ ದೀಪಕ್ ಟೀ ಸ್ಟಾಲ್ಗೆ ಆಗಮಿಸಿ ದಾಂಧಲೆ ನಡೆಸಿದ್ದಾರೆ. ದೀಪಕ್ ಮೇಲೆ ಹಲ್ಲೆ ನಡೆಸಿದ್ದಾರೆ. ನೂಪುರ್ ಶರ್ಮಾ ಬೆಂಬಲಿಸುವ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ದಾಳಿ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿದ 20 ಯುವಕರು ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ದೀಪಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇತ್ತ ಟೀ ಸ್ಟಾಲ್ ಸಂಪೂರ್ಣ ಧ್ವಂಸ ಮಾಡಲಾಗಿದೆ. ಇದೀಗ ನೂಪರ್ ಶರ್ಮಾ ಬೆಂಬಲಿಸದವರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವ ವ್ಯವಸ್ಥಿತಿ ಷಡ್ಯಂತ್ರ ದೇಶದಲ್ಲಿ ನಡೆಯುತ್ತಿದೆ ಅನ್ನೋ ಅನುಮಾನಗಳನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ನೂಪರ್ ಶರ್ಮಾಗೆ ಬೆಂಬಲ ಸೂಚಿಸಿದ ಉದಯಪುರದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ಭೀಕರ ಹತ್ಯೆ, ಮಹಾರಾಷ್ಟ್ರದಲ್ಲಿ ಮೆಡಿಕಲ್ ಸ್ಟೋರ್ ಮಾಲೀಕ ಉಮೇಶ್ ಕೋಲ್ಹೆ ಕೊಲೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇಧರ ಬೆನ್ನಲ್ಲೇ ಇದೀಗ ಬಿಹಾರದಲ್ಲೂ ಇದೇ ರೀತಿ ದಾಳಿ ನಡೆದಿದೆ. ಅದೃಷ್ಟವಶಾತ್ ಹಿಂದೂ ಯುವಕ ಅಪಾಯದಿಂದ ಪಾರಾಗಿದ್ದಾನೆ. ಆದರೆ ದೇಶದ ಹಲವು ಭಾಗಗಳಲ್ಲಿ ಈ ದಾಳಿ ಆತಂಕ ಹೆಚ್ಚಾಗುತ್ತಿದೆ.