Thursday, April 10, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಅಕ್ರಮ ಗೋ ಹತ್ಯೆ ಮಾಡಿದರೆ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಬಳಕೆ ; ಶಾಸಕ ಡಾ.ಭರತ್ ಶೆಟ್ಟಿ ಖಡಕ್ ಆದೇಶ – ಕಹಳೆ ನ್ಯೂಸ್

ಪಣಂಬೂರು: ರಾಜ್ಯ ಸರಕಾರದ ನೂತನ ಗೋ ಹತ್ಯೆ ಕಾಯಿದೆಯಲ್ಲಿ ಗೋ ಕಳ್ಳತನ ,ಅಕ್ರಮ ಕಸಾಯಿಖಾನೆ ನಡೆಸುವುದು, ಅಕ್ರಮ ಗೋ ಸಾಗಾಟ ಮಾಡುವ ಆರೋಪಿಗಳ ಆಸ್ತಿ ಮುಟ್ಟು ಗೋಲು ದಂಡನಾಸ್ತ್ರ ಕಾಯಿದೆಯನ್ನು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಖಡಕ್ ಆದೇಶ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಂದೆ ಅಕ್ರಮವಾಗಿ ಗೋ ಹತ್ಯೆ,ಕಳ್ಳತನ ಅಪರಾಧ ಪ್ರಕರಣ ಮಟ್ಟ ಹಾಕಲು ಈ ಕಠಿಣ ಅಸ್ತ್ರಗಳ ಬಳಕೆ ಮಾಡುತ್ತೇವೆ. ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಕಂದಾಯ ಇಲಾಖೆ ತಕ್ಷಣ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಬೇಕಾದ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೈನುಗಾರಿಕೆ ನಡೆಸಿ ಜೀವನ ನಡೆಸುವವರ ಹಟ್ಟಿಯಿಂದ ದನ ಕದಿಯುದನ್ನು, ಬೀಡಾಡಿ ದನಗಳ ಕದ್ದು ಹತ್ಯೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸಲಾಗದು. ಬಡವರ, ರೈತರ ಅನ್ನವನ್ನು ಕಸಿಯುವ ಕೆಲಸ ಯಾರೂ ಮಾಡಬಾರದು. ಆರೋಪ ರುಜುವಾತಾದರೆ ಅಂತಹವ ಆಸ್ತಿ ಮುಟ್ಟುಗೋಲು ದಂಡಾಸ್ತ್ರ ಪ್ರಯೋಗಿಸುವಂತೆ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ