Friday, January 24, 2025
ರಾಜಕೀಯರಾಷ್ಟ್ರೀಯಸುದ್ದಿ

ಕಾಳಿಮಾತೆ ಆಯ್ತು ಈಗ ಶಿವ-ಪಾರ್ವತಿ ವೇಷಧಾರಿಗಳ ಬಾಯಲ್ಲಿ ಸಿಗರೇಟ್ ; ಮತ್ತೊಮ್ಮೆ ಹಿಂದುಗಳನ್ನು ಕೆಣಕಿದ ಲೀನಾ – ಕಹಳೆ ನ್ಯೂಸ್

ಬೆಂಗಳೂರು: ಸಾಕ್ಷ್ಯಚಿತ್ರವೊಂದರಲ್ಲಿ ಹಿಂದುಗಳು ಆರಾಧಿಸುವ ಕಾಳಿ ಮಾತೆಯ ಬಾಯಲ್ಲಿ ಸಿಗರೇಟ್​ ಇಟ್ಟು ಅವಮಾನಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ, ಇದೀಗ ಮತ್ತೊಂದು ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಶಿವ-ಪಾರ್ವತಿ ವೇಷಧಾರಿಗಳ ಬಾಯಲ್ಲಿ ಸಿಗರೇಟ್ ಇರುವ ಫೋಟೋವನ್ನು ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಮೂಲಕ ಮತ್ತೊಮ್ಮೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು, ಎಲ್ಲೆಡೆ ಈಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೀನಾ ಮೈಣಿಮೇಕಲೈ ನಿರ್ದೇಶನದ ‘ಕಾಳಿ’ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್​ನಲ್ಲಿ ಕಾಳಿದೇವಿಯ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ LGBTQ(ಗೇ, ಟ್ರಾನ್ಸ್ ಜೆಂಡರ್ ಸಮುದಾಯದ್ದು) ಧ್ವಜ ಹಿಡಿದಿರುವ, ಬಾಯಲ್ಲಿ ಸಿಗರೇಟ್​ ಇತ್ತು. ಜುಲೈ 4ರಂದು ಕೆನಾಡದ ಫಿಲ್ಮ್ ಪೆಸ್ಟಿವಲ್​ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುವ ಪೋಸ್ಟರ್ ವೈರಲ್​ ಆಗಿದ್ದು, ವಿವಾದಾತ್ಮಕ ಪೋಸ್ಟ್ ನೋಡಿ ಹಿಂದೂ ಸಂಘಟನೆಗಳು ರೊಚ್ಚಿಗೆದ್ದು ಆಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹಿಂದುಗಳ ಬಳಿ ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದಾರೆ. ಪೋಸ್ಟರ್​ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದಂತೆ ಟ್ವಿಟರ್​ ಸಂಸ್ಥೆಯು ಲೀನಾಳ ಖಾತೆಯಿಂದ ವಿವಾದಾತ್ಮಕ ಕಾಳಿಮಾತೆ ಫೋಸ್ಟರ್​ ಫೋಟೋವನ್ನು ನಿನ್ನೆಯಷ್ಟೇ ಡಿಲೀಟ್​ ಮಾಡಿತ್ತು. ಇಷ್ಟಕ್ಕೆ ಸುಮ್ಮನಾಗದ ಲೀನಾ, ಇಂದು ಶಿವ-ಪಾರ್ವತಿ ವೇಷಧಾರಿಗಳ ಬಾಯಲ್ಲಿ ಸಿಗರೇಟ್​ ಇರುವ ಫೋಟೋವನ್ನು ಟ್ವಿಟರ್​ನಲ್ಲಿ ಹಾಕಿ ಹಿಂದುಗಳ ಕಣ್ಣು ಕೆಂಪಾಗಿಸಿದ್ದಾಳೆ.

ಹಿಂದುಗಳನ್ನೇ ಗುರಿಯಾಗಿಸಿಕೊಂಡು ಲೀನಾ ಮೈಣಿಮೇಕಲೈ, ಹಿಂದು ದೇವರ ಬಗ್ಗೆ ಅಪಮಾನಕಾರಿಯಾಗಿ ಫೋಟೋಗಳನ್ನು ಹಾಕಿ ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ. ಬೇಕಂತಂಲೇ ದುರುದ್ದೇಶದಿಂದ ಮಾಡುತ್ತಿದ್ದಾಳೆ. ಹುಚ್ಚಿ ಇರಬೇಕು, ಮಾನಸಿಕ ಸ್ಥಿಮಿತತೆ ಇಲ್ಲ ಅನ್ನಿಸುತ್ತೆ. ಮೊದಲು ಮನೋವೈದ್ಯರ ಬಳಿ ಚಿಕಿತ್ಸೆಗೆ ವ್ಯವಸ್ಥೆ ಆಗಬೇಕು. ಬಿಟ್ಟಿ ಪ್ರಚಾರಕ್ಕಾಗಿ ಹಿಂದು ದೇವರ ಬಗ್ಗೆ ಲೀನಾ ಅವಹೇಳನಕಾರಿ ಪೋಸ್ಟ್​ ಮಾಡುತ್ತಿದ್ದಾಳೆ. ಅವಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ದೇಶಾದ್ಯಂತ ಆಗ್ರಹ ಕೇಳಿಬರುತ್ತಿದೆ.