ಉಡುಪಿಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ – ಕಹಳೆ ನ್ಯೂಸ್
ಉಡುಪಿ, ಜು 07 : ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಮತ್ತು ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇದೇ ಪ್ರಥಮ ಬಾರಿಗೆ ತ್ರಿವಳಿ ಮಕ್ಕಳ ಜನನವಾಗಿದೆ.
ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇಲ್ಲಿಯ ಡಾ.ಕವಿಶಾ ಭಟ್, ಡಾ.ರಜನಿ ಕಾರಂತ್, ಡಾ.ಸೂರ್ಯನಾರಾಯಣ, ಡಾ.ಗಣಪತಿ ಹೆಗಡೆ ಹಾಗೂ ಡಾ.ಮಹಾದೇವ ಭಟ್ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಗುರುವಾರದಂದು 27 ವರ್ಷ ಪ್ರಾಯದ ಸಿದ್ದಿ ಜನಾಂಗ ಮೂಲದ ಗರ್ಭಿಣಿಗೆ ಸಿಸೇರಿಯನ್ ಹೆರಿಗೆ ಮಾಡಿದ್ದು, ತ್ರಿವಳಿಗಳು ಜನಿಸಿವೆ.
ತಾಯಿ ಮೂಲತಃ ಅಂಕೋಲಾ, ಉತ್ತರ ಕನ್ನಡ ಜಿಲ್ಲೆ ಅಂಕೋಲದವರಾಗಿದ್ದು, ಸದ್ಯ ತಾಯಿ ಮತ್ತು ತ್ರಿವಳಿ ನವಜಾತ ಶಿಶುಗಳು ಆರೋಗ್ಯವಾಗಿರುವರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಜೂನ್ 1 ರ ನಂತರ ಸರಕಾರವೇ ಈ ಆಸ್ಪತ್ರೆಯನ್ನು ನಡೆಸುತ್ತಿದ್ದು, ತ್ರಿವಳಿ ಮಕ್ಕಳ ಯಶಸ್ವಿ ಜನನ, ಸಾಧನೆ ಆಗಿದೆ.