ಮಂಗಳೂರು: ತುಳುನಾಡಿನ ಭವ್ಯವಾದ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜೈನ ಮನೆತನವಾದ ಬಳ್ಳಾಲ್ ಕುಟುಂಬದ ರಾಹುಲ್ ಬಲ್ಲಾಳ್ ಜುಲೈ 6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿಯ ರತ್ನತ್ರಯ ತೀರ್ಥ ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತಸರರಾದ ಕೆ.ಜಯವರ್ಮರಾಜ್ ಬಳ್ಳಾಲ್ ಹಾಗೂ ವಿನಯಾ ಜೆ .ಬಳ್ಳಾಲ್ ಅವರ ಪುತ್ರರಾಗಿದ್ದ ರಾಹುಲ್ ಬಲ್ಲಾಳ್ ಕಾನೂನು ಪದವೀಧರರು ತಮ್ಮ ಕುಟುಂಬದ ಕೃಷಿ ಹಾಗೂ ಹೊಟೋಲ್ ಹೀಗೆ ಬೇರೆಬೇರೆ ಉದ್ಯಮಗಳನ್ನು ಮುನ್ನಡೆಸುತ್ತಾ ಕುಟುಂಬದ ಹಿರಿಮೆ ಗರಿಮೆಗೆ ಅನುಸಾರವಾಗಿ ವಹಿವಾಟು ನಡೆಸುತ್ತಾ ಎಲ್ಲರ ಪ್ರೀತಿ ವಿಶ್ವಾಸ ಕ್ಕೆ ಪಾತ್ರರಾಗಿದ್ದಾರು .
ರಾಹುಲ್ ಬಲ್ಲಾಳ್ ಆತ್ಮಕ್ಕೆ ಉತ್ತಮ ಸದ್ಗತಿಗೆ ಪಾರ್ಥನೆ ಯನ್ನು ವಿವಿಧ ಜೈನ ಮಠದಿಶಾರು ಮಾಡಿರುತ್ತಾರೆ.
ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ
ಶ್ರೀ ಜೈನ ಮಠ ಮೂಡುಬಿದಿರೆ.
ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ
ಶ್ರೀ ಜೈನ ಮಠ ಹುಂಚ.
ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ
ಶ್ರೀ ಜೈನ ಮಠ ಎನ್.ಆರ್.ಪುರ
ಕೆ.ಜಯವರ್ಮರಾಜ್ ಬಳ್ಳಾಲ್(ತಂದೆ) ವಿನಯಾ ಜೆ.ಬಲ್ಲಾಳ್(ತಾಯಿ) ಡಾ.ಪ್ರೀತಿ ಬಳ್ಳಾಲ್ (ಪತ್ನಿ) ಆದಿತ್ಯ ಬಳ್ಳಾಲ್ (ಪುತ್ರ) ಮಮತಾ ಬಳ್ಳಾಲ್ ( ಅಕ್ಕ) ಚಂದ್ರನಾಥ ಅರಿಗ(ಬಾವ) ಹಾಗೂ ಬಳ್ಳಾಲ್ ಕುಟುಂಬದ ಅಪರ ಬಂದು ಬಳಗದವರನ್ನು ಮತ್ತು ಮಿತ್ರರನ್ನು , ಸಿಬ್ಬಂದಿವರ್ಗದವರನ್ನು ರಾಹುಲ್ ಬಲ್ಲಾಳ್ ರವರು ಆಗಲಿರುತ್ತಾರೆ.