ಮಂಗಳೂರು: ಅರ್ಕುಳ ಕೋಟೆಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಬಾತೀಶ್‌ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು (ಎಸಿ) ನೋಟಿಸ್ ನೀಡಿದ್ದಾರೆ.
ಆರೋಪಿ ಬಾತೀಶ್ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಜುಲೈ 3 ರಂದು ಗ್ರಾಮಾಂತರ
ಪೊಲೀಸರು ದಾಳಿ ನಡೆಸಿ 95 ಕೆಜಿ ದನದ ಮಾಂಸ, ತೂಕದ ತಕ್ಕಡಿ, ಕತ್ತಿಗಳು, ಮರದ ದಿಮ್ಮಿ ಇತ್ಯಾದಿಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಎ ಕೆ ಖಾಲಿದ್ ಎಂಬುವರ ಮನೆಯ
ಪಕ್ಕದ ಶೆಡ್‌ನಲ್ಲಿ ಈ ಅಕ್ರಮ ನಡೆಸುತ್ತಿದ್ದು, ಪೊಲೀಸರು
ದಾಳಿ ನಡೆಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಇನ್ನು ಆರೋಪಿಯು ಯಾವುದೇ ಅನುಮತಿಯಿಲ್ಲದೆ
ಜಾನುವಾರುಗಳನ್ನು ಕೊಂದಿರುವ ಕಾರಣ, ಕೃತ್ಯ ಎಸಗಿದ
ಸ್ಥಳವನ್ನು ಜಪ್ತಿ ಮಾಡುವ ಬಗ್ಗೆ ವಿಚಾರಣೆಯನ್ನು ಜುಲೈ 12
ರಂದು ಮಧ್ಯಾಹ್ನ 3 ಗಂಟೆಗೆ ಎಸಿ ನ್ಯಾಯಾಲಯದ
ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಎಸಿ ಸಲ್ಲಿಸಿದ
ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆರೋಪಿಯು ತನ್ನ ಅಧಿಕೃತ
ಪ್ರತಿನಿಧಿ ಅಥವಾ ವಕೀಲರ ಮೂಲಕ ಆ ದಿನದಂದು ತನ್ನ
ವಾದಗಳನ್ನು ಅಥವಾ ಪ್ರತಿವಾದಗಳನ್ನು ಮಂಡಿಸಲು
ಅನುಮತಿಸಲಾಗಿದ್ದು ಇದನ್ನು ಅನುಸರಿಸದಿದ್ದಲ್ಲಿ,
ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಎಂದು ತಿಳಿಸಿದ್ದಾರೆ.
ಗೋ ಹತ್ಯೆ ಪ್ರಕರಣದ ಬೆನ್ನುಬಿದ್ದ ಭರತ್ ಶೆಟ್ಟಿ.!
You Might Also Like
ಎಸ್.ಜಿ.ಎಫ್.ಐ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟ -ಕಹಳೆ ನ್ಯೂಸ್
ವಿವೇಕಾನಂದ ಪದವಿಪೂರ್ವ ಕಾಲೇಜಿನ ಧನುಷ್ ರಾಮ್ ಗೆ ಕಂಚಿನ ಪದಕ ಕೊಲ್ಕತ್ತಾದಲ್ಲಿ ನಡೆದ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ದ 68ನೇ ರಾಷ್ಟ್ರ ಮಟ್ಟದ ಚೆಸ್...
ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ ಬಿ ಎ ವಿದ್ಯಾರ್ಥಿನಿ ಸ್ವಾತಿ ಡಿ ಗೌಡ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ-ಕಹಲೆ ನ್ಯೂಸ್
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿ ಬಿ ಎ ವಿದ್ಯಾರ್ಥಿನಿ ಸ್ವಾತಿ ಡಿ ಗೌಡ ಕಂಪನಿ ಸೆಕ್ರೆಟರಿ ಯ ಪ್ರವೇಶ ಪರೀಕ್ಷೆ ಸಿ ಯಸ್ ಈ...
ಫಿಲೋಮಿನಾ ಪ.ಪೂ ಕಾಲೇಜಿಗೆ ‘ಪ್ರಗತಿ ವೈಭವ 2024’ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ-ಕಹಳೆ ನ್ಯೂಸ್
ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇದರ ಸಾರಥ್ಯದಲ್ಲಿ ನ17 ರಂದು ನಡೆದ 'ಪ್ರಗತಿ ವೈಭವ - 2024' ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಸಾಂಸ್ಕೃತಿಕ...
ದೇವರ ದಾಸನಿಗೆ ಲೋಕದ ದಾಸ್ಯದಿಂದ ಮುಕ್ತಿ: ಲಕ್ಷಿ್ಮೀಶ ತೋಳ್ಪಾಡಿ-ಕಹಳೆ ನ್ಯೂಸ್
ಪುತ್ತೂರು: ಪ್ರತಿಯೊಬ್ಬರಲ್ಲೂ ಆಂತರಿಕ ಅವ್ಯಕ್ತವಾಗಿದೆ, ಅದು ವ್ಯಕ್ತವಾಗಲು ಹಂಬಲಿಸಿದಾಗ, ಲೌಕಿಕ ಜೀವನಕ್ಕಿಂತ ದೊಡ್ಡದು ಯಾವುದಿಲ್ಲ ಎಂದು ಭಾವಿಸಿ ಶಕ್ತಿಯನ್ನು ಮುರಿಯುತ್ತೇವೆ. ಹಾಗಾಗಿ ಒಳಗಿರುವ ಅಂತರ್ಶಕ್ತಿ ಮುಸುಕುತ್ತಿದೆ....