Friday, November 22, 2024
ಸಿನಿಮಾಸುದ್ದಿ

ದಕ್ಷಿಣ ಭಾರತದ ಜನಪ್ರಿಯ ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತ – ಕಹಳೆ ನ್ಯೂಸ್

ಚೆನ್ನೈ, ಜುಲೈ 8: ದಕ್ಷಿಣ ಭಾರತದ ಜನಪ್ರಿಯ ನಟ ಚಿಯಾನ್ ವಿಕ್ರಮ್‌ಗೆ ಹೃದಯಾಘಾತವಾಗಿದೆ. ಶುಕ್ರವಾರ (ಜುಲೈ 7) ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ವಿಕ್ರಮ್ ಅಥವಾ ಚಿಯಾನ್ ವಿಕ್ರಮ್ ಎಂದೇ ಜನಪ್ರಿಯರಾಗಿರುವ ನಟನ ಅಸಲಿ ಹೆಸರು ಕೆನಡಿ ಜಾನ್ ವಿಕ್ಟರ್. ತಮಿಳು ಚಿತ್ರರಂಗದಲ್ಲಿ ಹಲವು ಏಳುಬೀಳು ಕಂಡಿರುವ ವಿಕ್ರಮ್ ಏಳು ಫಿಲಂಫೇರ್ ಪ್ರಶಸ್ತಿ ಪಡೆದಿದ್ದು, ಗಾಯಕರಾಗಿ ಕೂಡಾ ಹೆಸರುವಾಸಿಯಾಗಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ರಮ್ ಹಲವು ಬಾರಿ ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. 2011ರಲ್ಲಿ ಪೀಪಲ್ಸ್ ಯೂನಿವರ್ಸಿಟಿ ಆಫ್ ಮಿಲನ್ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಚೆನ್ನೈನ ಲೊಯೊಲಾ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಜೊತೆಗೆ ನಾಟಕರಂಗದಲ್ಲೂ ತೊಡಗಿಸಿಕೊಂಡರು. ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ. ಅದರೆ, ನಂತರ ಸೂಪರ್ ಸ್ಟಾರ್ ಆಗಿ ಬೆಳೆದರು.

ಸಮಾಜ ಸೇವೆ:

ವಿಶ್ವಸಂಸ್ಥೆಯ ಮಾನವ ವಸಾಹತು ಕಾರ್ಯಕ್ರಮದ ಯುವ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಸಂಜೀವನಿ ಟ್ರಸ್ಟ್‌ನ ಬ್ರಾಂಡ್ ಅಂಬಾಸಿಡರ್ ವಿಕ್ರಮ್ ಫೌಂಡೇಶನ್ ಮೂಲಕ ತನ್ನದೇ ಆದ ಕಲ್ಯಾಣ ಸಂಘವನ್ನು ನಡೆಸುತ್ತಿದ್ದಾರೆ. 2015ರಲ್ಲಿ ದಕ್ಷಿಣ ಭಾರತದ ಪ್ರವಾಹದ ನಂತರ ನಗರದ ಸ್ವಯಂಸೇವಕರಿಗೆ ಗೌರವ ಸೂಚಕವಾಗಿ ಅವರು 2016ರಲ್ಲಿ ಸ್ಪಿರಿಟ್ ಆಫ್ ಚೆನ್ನೈನ ಪ್ರವಾಹ ಪರಿಹಾರ ಗೀತೆಯಾದ ವೀಡಿಯೊವನ್ನು ನಿರ್ಮಿಸಿ ನಿರ್ದೇಶಿಸಿದರು.

ತನ್ನ ವಿಶೇಷವಾದ ಬ್ಯಾಟಿಂಗ್ ಶೈಲಿಯಿಂದ ದಾಖಲೆ ಮಾಡಿದ ಸೂರ್ಯ ಕುಮಾರ್ | 

ಸದೃಢ ದೇಹಾದಾರ್ಢ್ಯ:

ವಿಕ್ರಮ್ ಅವರು ಸೇಲಂ ಬಳಿಯ ಗಿರಿಧಾಮದಲ್ಲಿರುವ ಬೋರ್ಡಿಂಗ್ ಶಾಲೆಯಾದ ಯೆರ್ಕಾಡ್ ಮೌಂಟೇನ್ ಶಾಲೆಯಲ್ಲಿ ಶಿಕ್ಷಣ ಪಡೆದರು.1983ರಲ್ಲಿ ಪದವಿ ಪಡೆದರು. ಕರಾಟೆ, ಕುದುರೆ ಸವಾರಿ ಮತ್ತು ಈಜುಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಾಲೆಯಲ್ಲಿ ತಮ್ಮ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಕ್ರೀಡೆಯಲ್ಲಿ ತೊಡಗಿಕೊಂಡಿದ್ದರು. ಚಿತ್ರರಂಗಕ್ಕೆ ಬಂದ ಬಳಿಕವೂ ತಮ್ಮ ಮೈಕಟ್ಟು, ದೇಹಾದಾರ್ಢ್ಯತೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಪಾತ್ರಕ್ಕೆ ತಕ್ಕಂತೆ ದೇಹ ದಂಡಿಸಿ, ಮೈಕಟ್ಟು ಬದಲಾಯಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ತಮ್ಮ ಮಗನ ಜೊತೆ ಒಟ್ಟಿಗೆ ನಟಿಸಿ ಕಿಚ್ಚು ಹಬ್ಬಿಸಿದ್ದರು.

ಕೇರಳದ ತಲಚ್ಚೇರಿ ಮೂಲದ ಶೈಲಜಾ ಬಾಲಕೃಷ್ಣನ್ ಅವರನ್ನು 1992ರಲ್ಲಿ ವಿಕ್ರಮ್ ಮದುವೆಯಾದರು. ಚೆನ್ನೈ ಶಾಲೆಯಲ್ಲಿ ಮನೋವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಅಕ್ಷಿತಾ ಮತ್ತು ಓರ್ವ ಪುತ್ರ ಧ್ರುವ್ ಇದ್ದಾರೆ. ಅವರ ಮಗಳು ಎಂ. ಕರುಣಾನಿಧಿಯ ಮೊಮ್ಮಗ ಮನು ರಂಜಿತ್ ಅವರನ್ನು ವರಿಸಿದ್ದಾರೆ. ಅರ್ಜುನ್ ರೆಡ್ಡಿ ರಿಮೇಕ್ ಚಿತ್ರ ಆದಿತ್ಯ ವರ್ಮಾ ಮೂಲಕ ಧ್ರುವ್ ವಿಕ್ರಮ್ ಚಿತ್ರರಂಗಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.

(ಮಾಹಿತಿ ಕೃಪೆ: ವಿಕಿಪೀಡಿಯಾ, ತಮಿಳು ಒನ್‌ಇಂಡಿಯಾ)