Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಉಪ್ಪಿನಂಗಡಿ: ಅಕ್ರಮವಾಗಿ ಸಾಗಿಸುತ್ತಿದ್ದ ಅಕೇಶಿಯಾ ಮರ ವಶ : ಮೂವರ ಬಂಧನ – ಕಹಳೆ ನ್ಯೂಸ್

ಉಪ್ಪಿನಂಗಡಿ : ಕಣಿಯೂರು ಗ್ರಾಮದ ಗಾಳಿಗುಡ್ಡೆ ಎಂಬಲ್ಲಿ ಪದ್ಮಂಜ ಪಿಲಿಗೂಡು ರಸ್ತೆಯಲ್ಲಿ ಕಣಿಯೂರು ಗ್ರಾಮದ ಸಾರ್ವಜನಿಕರ ಸಹಾಯದಿಂದ ಅಕ್ರಮವಾಗಿ ಅಕೇಶಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಲಾಯಿತು.

ಪ್ರಕರಣದಲ್ಲಿ ಮೂವರು ಆರೋಪಿಗಳು ಇದ್ದು ಲಾರಿ ಚಾಲಕನಾದ ಅಶ್ರಫ್ ಬಿನ್ ಅಬ್ಬೋನ್ ಬೊಗೋಳಿ ಮನೆ, ಪಾಣೆಮಂಗಳೂರು ಇವರನ್ನು ಬಂಧಿಸಿದ್ದು. ಉಳಿದ ಆರೋಪಿಗಳಾದ ಮಹಮ್ಮದ್ ಅಶ್ಪಕ್ ಬಿನ್ ಜಾಕೀರ್ ಹುಸೈನ್ ಕಾಣಿಯೂರು, ಮಹಮ್ಮದ್ ಆಸೀಫ್ ಬಿನ್ ಜಾಕಿರ್ ಹುಸೈನ್ ಕಾಣಿಯೂರು ಇವರು ತಲೆಮರಿಸಿಕೊಂಡಿದ್ದು. ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಶಪಡಿಸಿಕೊಂಡ ಸೊತ್ತುಗಳ ಹಾಗೂ ವಾಹನದ ಅಂದಾಜು ಮೌಲ್ಯ 6.00.000 ವಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ, ಮಂಗಳೂರು ಡಾ. ವೈ ಕೆ ದಿನೇಶ್ ಕುಮಾರ್ ಇವರ ಆದೇಶದಂತೆ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಕೆ ಕಾರ್ಯಪ್ಪ ಇವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ. ಎ ಇವರು ತನಿಖೆಯನ್ನು ನಡೆಸುತ್ತಿದ್ದು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಭರತ್. ಎ, ಧೀರಜ್. ಎಸ್, ರಾವುತಪ್ಪ ಬೀರದಾರ್, ಅರಣ್ಯ ರಕ್ಷಕರಾದ ಕೆ.ಎನ್ ಜಗದೀಶ, ಪ್ರಶಾಂತ ಮಾಳಗಿ ಹಾಗೂ ವಾಹನ ಚಾಲಕ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು