ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ; ರೆಡ್ ಅಲರ್ಟ್ ಮುಂದುವರಿಕೆ – ಕಹಳೆ ನ್ಯೂಸ್
ಮಂಗಳೂರು, ಜು 10 : ಕರಾವಳಿ ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರೆಡ್ ಅಲರ್ಟ್ ಮುಂದುವರಿಯಲಿದೆ.
ಜಿಲ್ಲೆಯಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ರೆಡ್ ಅಲರ್ಟ್ ಜಾರಿಯಲ್ಲಿತ್ತು. ಜುಲೈ 13ರವರೆಗೆ ಮಳೆ ಇದೇ ರೀತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ 14ರಂದು ಸಾಧಾರಣ ಮಳೆಯಾಗಲಿದ್ದು, ಅಂದು ಆರೆಂಜ್ ಅಲರ್ಟ್ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಧಾರಾಕಾರ ಮಳೆ ಮುಂದುವರಿಯಲಿದೆ. ಭಾನುವಾರ ಮಧ್ಯಾಹ್ನದವರೆಗೆ ಸುಬ್ರಹ್ಮಣ್ಯದಲ್ಲಿ ಅತಿ ಹೆಚ್ಚು 21ಸೆಂಮೀನಷ್ಟು ಮಳೆ ದಾಖಲಾಗಿದೆ. ಇನ್ನ ಮೂಲ್ಕಿಯಲ್ಲಿ 20 ಸೆಂಮೀ, ಉತ್ತರ ಕನ್ನಡ 19 ಸೆಂಮೀ, ಮೂಡಬಿದಿರೆ, ಬೆಳ್ತಂಗಡಿ 18 ಸೆಂಮೀ ಮಳೆಯಾಗಿದೆ. ಧರ್ಮಸ್ಥಳ, ಭಾಗಮಂಡಲ, ಜಯಪುರ, ಮಾಣಿ, ಕೊಟ್ಟಿಗೆಹಾರ, ಕಾರ್ಕಳ, ಸುಳ್ಯ, ಮಂಗಳೂರು, ಪುತ್ತೂರು, ಶೃಂಗೇರಿಗಳಲ್ಲಿಯೂ ಧಾರಾಕಾರ ಮಳೆಯಾಗಿದೆ.