Sunday, January 19, 2025
ಕುಂದಾಪುರಸುದ್ದಿ

ಕುಂದಾಪುರ: ಮೊಬೈಲ್‌ ಅಂಗಡಿಯಲ್ಲಿ ಕಳವು ಪ್ರಕರಣ-ನಾಲ್ವರು ಅರೆಸ್ಟ್ – ಕಹಳೆ ನ್ಯೂಸ್

ಕುಂದಾಪುರ: ಕುಂದಾಪುರದ ಬೈಂದೂರು ತಾಲ್ಲೂಕಿನ ಉಪ್ಪುಂದ ದೇವಸ್ಥಾನದ ಬಳಿ ಮೊಬೈಲ್ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಮುರುಡೇಶ್ವರ ಬೀಚ್‌ ಬಳಿ ಬಂಧಿಸಿದ ಘಟನೆ ನಡೆದಿದೆ.

ಭಟ್ಕಳ ಮುರುಡೇಶ್ವರ ಮಾವಳ್ಳಿ ನಿವಾಸಿ ಮೊಹಮ್ಮದ್ ಇಫ್ಹಲ್ (27), ಮಹಮ್ಮದ್ ರಫಿ (21), ಮಹಮ್ಮದ್ ಅಸೀಮ್ ಡೊನ್ನಾ (20), ಮೊಹಮ್ಮದ್ ರಾಹಿಕ್ (22) ಬಂಧಿತ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೂರು ನಿವಾಸಿ ಪ್ರಶಾಂತ್ ಎಂಬವರ ಮಾಲೀಕತ್ವದ ಮೊಬೈಲ್ ಝೋನ್ ಎಂಬ ಅಂಗಡಿಯಲ್ಲಿ ಜುಲೈ 5 ರಂದು ರಾತ್ರಿ ಅಂಗಡಿಯ ಶೆಟರ್‌ ಮುರಿದು ಕಳ್ಳತನ ಮಾಡಿದ ಘಟನೆ ಮರುದಿನ ಬೆಳಕಿಗೆ ಬಂದಿದೆ.

ಅಂಗಡಿಯಲ್ಲಿ 3500 ನಗದು, 25 ಸಾವಿರ ಬೆಲೆ ಬಾಳುವ 17 ಕೀಪ್ಯಾಡ್ ಮೊಬೈಲ್ ಫೋನುಗಳು ಹಾಗೂ 5 ಸಾವಿರ ರೂ. ಮೌಲ್ಯದ ಮೊಬೈಲ್‌ಗೆ ಉಪಯೋಗಿಸುವ ಪವರ್‌ ಬ್ಯಾಂಕ್ ಹಾಗೂ ಬ್ಲೂಟೂತ್ ಕಳವುಗೈದಿದ್ದು ಈ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 33500 ರೂ. ಆಗಿದ್ದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಸಬ್‌ಇನ್ಸ್‌ಪೆಕ್ಟರ್‌ ಪವನ್‌ ನಾಯಕ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಆರೋಪಿಗಳಿಂದ 20 ಸಾವಿರ ಮೌಲ್ಯದ ಮೊಬೈಲ್ ಫೋನುಗಳು, ಕೃತ್ಯಕ್ಕೆ ಉಪಯೋಗಿಸಿದ 8 ಲಕ್ಷ ಮೌಲ್ಯದ ಕಾರು, ಮೂರು ಪವರ್‌ ಬ್ಯಾಂಕ್ ಮೊದಲಾದವುಗಳನ್ನು ವಶಕ್ಕೆ ಪಡೆಯಲಾಗಿದೆ.