Sunday, November 24, 2024
ಸುದ್ದಿ

ನವದೆಹಲಿ : 9,500 ಕೆ.ಜಿ ತೂಕದ ಕಂಚಿನ ಬೃಹತ್ ‘ಅಶೋಕ ಸ್ತಂಭ’ ಅನಾವರಣಗೊಳಿಸಿದ ಪ್ರಧಾನಿ – ಕಹಳೆ ನ್ಯೂಸ್

ನವದೆಹಲಿ : ನೂತನ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ನಿರ್ಮಿಸಲಾದ 6.5 ಮೀಟರ್ ಉದ್ದದ ಕಂಚಿನ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭವನ್ನ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಈ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ಉದ್ಯೋಗಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಶೋಕ ಸ್ತಂಭವು 20 ಅಡಿಗಳಿಗಿಂತ ಹೆಚ್ಚು ಎತ್ತರವಿದೆ. ಕ್ರೇನ್ ಸಹಾಯದಿಂದ ಈ ಸ್ತಂಭವನ್ನು ಹೊಸ ಸಂಸತ್ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ.
ಮೋದಿ ಸರ್ಕಾರದ ಉಪಕ್ರಮದ ಮೇರೆಗೆ ದೆಹಲಿಯಲ್ಲಿ ಹೊಸ ಸಂಸತ್ ಭವನವನ್ನ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸಂಸತ್ ಭವನವು ಸುಮಾರು 93 ವರ್ಷಗಳಷ್ಟು ಹಳೆಯದಾಗಿದ್ದು, ಅನೇಕ ನ್ಯೂನತೆಗಳನ್ನ ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ಸಂಸತ್ ಕಟ್ಟಡವು ಆಧುನಿಕ ಸೌಲಭ್ಯಗಳು ಮತ್ತು ಸುರಕ್ಷತಾ ಸಲಕರಣೆಗಳನ್ನು ಹೊಂದಿರುತ್ತದೆ. ಇದು ಏಕಕಾಲದಲ್ಲಿ 1,224 ಸದಸ್ಯರನ್ನು ಹೊಂದಬಹುದು.