ಜೆ. ಇ. ಇ ಮೈನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ- ಕಹಳೆ ನ್ಯೂಸ್
ಪುತ್ತೂರು: 2022ನೇ ಸಾಲಿನ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಮೊದಲ ಸುತ್ತಿನ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.
ವಿದ್ಯಾರ್ಥಿಗಳಾದ ವಿಶಾಖ್ ಕಾಮತ್ 99.33 ಪರ್ಸಂಟೈಲ್(ಪುತ್ತೂರಿನ ಬೊಳುವಾರಿನ ಎಂ. ವಿದ್ಯಾಧರ್ ಕಾಮತ್ ಮತ್ತು ಎಂ. ಮುಕ್ತ ಕಾಮತ್ ದಂಪತಿ ಪುತ್ರ),ಕೀರ್ತನ್ ಅಡಿಗ 98.47 ಪರ್ಸಂಟೈಲ್ (ಕಾಸರಗೋಡಿನ ಬಾಲಕೃಷ್ಣ ಅಡಿಗ ಮತ್ತು ಸುಲೋಚನಾ ದಂಪತಿ ಪುತ್ರ), ಶ್ರೀನಿಧಿ ಐ 98.42 ಪರ್ಸಂಟೈಲ್(ಕಾಸರಗೊಡಿನ ಪೆರ್ಲದ ಹರೀಶ್ ಐ ಮತ್ತು ಜಯಪ್ರದ ಕೆ ದಂಪತಿ ಪುತ್ರ), ಮನ್ವಿತ ಎನ್ ಪಿ 94.61 ಪರ್ಸಂಟೈಲ್ (ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾ ದಂಪತಿ ಪುತ್ರಿ), ಪವನ್ ವೈ.ಡಿ.ಜೆ 90.2 ಪರ್ಸಂಟೈಲ್(ಪುತ್ತೂರು ಪಡ್ನೂರಿನ ದೇವಪ್ಪ ಗೌಡ ವೈ ಮತ್ತು ಕುಸುಮ ಬಿ ದಂಪತಿ ಪುತ್ರ), ಗಗನ್ ಎಂ.ಎಸ್ 89.38 ಪರ್ಸಂಟೈಲ್ (ಪುತ್ತೂರು ನೆಲಪ್ಪಾಲಿನ ಶಿವರಾಮ ಎಂ.ಎಸ್ ಮತ್ತು ಮಮತಾ ಎಂ.ಕೆ ದಂಪತಿ ಪುತ್ರ), ಚೈತನ್ಯ ಎಸ್ 86.75 ಪರ್ಸಂಟೈಲ್(ಬಂಟ್ವಾಳದ ನೇರಳಕಟ್ಟೆಯ ಈಶ್ವರ ನಾಯ್ಕ ಎಸ್ ಮತ್ತು ಗೀತಾ ಜಿ ದಂಪತಿ ಪುತ್ರಿ) ಅಂಕ ಗಳಿಸಿದ್ದಾರೆ.
ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ.ಇ.ಇ ಅರ್ಹತೆಯನ್ನು ಪಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.