Recent Posts

Monday, January 20, 2025
ಸುದ್ದಿ

ಬೋಳ ದೇವಸ್ಥಾನದ ಪಂಚಲೋಹ ಮೂರ್ತಿ ಸಹಿತ ಸಿಸಿಟಿವಿಯ ಡಿವಿಆರ್ ಅನ್ನೇ ಹೊತೊಯ್ದ ಕಳ್ಳರು–ಕಹಳೆ ನ್ಯೂಸ್

ಕಾರ್ಕಳ: ಬೋಳ ಶ್ರೀ ಮೃತ್ಯುಂಜಯ ದೇವಸ್ಥಾನದಿಂದ ಪಂಚಲೋಹದ ಬಲಿ ಮೂರ್ತಿ, ಕಾಣಿಕೆ ಹುಂಡಿ, ಸಿಸಿ ಕ್ಯಾಮರದ ಡಿವಿಆರ್ ಕಳವಾಗಿದೆ. ಭಾನುವಾರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಬಲಿ ಮೂರ್ತಿ, ಹುಂಡಿಯಲ್ಲಿದ್ದ ಅಂದಾಜು 1.5 ಲಕ್ಷ ರೂ. ಕಳ್ಳತನವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ  ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ. ದೇವಸ್ಥಾನದ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಪಂಚಲೋಹದ ಬಲಿಮೂರ್ತಿ ಕಳವು ಮಾಡಿದ್ದಾರೆ. ಅಲ್ಲದೆ ಕಾಣಿಕೆ ಡಬ್ಬಿ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು