Monday, January 20, 2025
ಉಡುಪಿದಕ್ಷಿಣ ಕನ್ನಡಸುದ್ದಿ

ದ.ಕ. ಮತ್ತು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಮಾನ್ಯ ಮುಖ್ಯಮಂತ್ರಿಗಳ ತಾತ್ಕಾಲಿಕ ಪ್ರವಾಸ ಕುರಿತ ಪರಿಷ್ಕøತ ಪಟ್ಟಿ – ಕಹಳೆ ನ್ಯೂಸ್

ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಜು.12 ಮತ್ತು 13 ರಂದು ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.

ಜು.12ರಂದು ದ.ಕ.ಜಿಲ್ಲೆಯ ಪ್ರವಾಸ ಕುರಿತ ಪರಿಷ್ಕøತ ಪ್ರವಾಸ ಪಟ್ಟಿ ಈ ರೀತಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಡಿಕೇರಿಯಿಂದ ನಿರ್ಗಮಿಸಿ 3 ಗಂಟೆಗೆ ಸಂಪಾಜೆಗೆ ಆಗಮಿಸುವರು. ಸಂಪಾಜೆಯಲ್ಲಿ ದ.ಕ.ಜಿಲ್ಲಾಡಳಿತದ ವತಿಯಿಂದ ಸ್ವಾಗತ ನೀಡಲಾಗುತ್ತದೆ. 3.30ಕ್ಕೆ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಸಚಿವ ಎಸ್.ಅಂಗಾರ ಅವರು ಭೂಕಂಪನಕ್ಕೆ ಸಂಬಂಧಿಸಿದ ಮಾಹಿತಿ ಹಾಗು ಮನವಿಯನ್ನು ಮುಖ್ಯಮಂತ್ರಿಯವರಿಗೆ ನೀಡುವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದು, ಈ ಅವಧಿಯಲ್ಲಿ ಉಪ್ಪಿನಂಗಡಿ ಸಂಗಮ ಸ್ಥಳದಲ್ಲಿ ನದಿ ಮಟ್ಟದ ವೀಕ್ಷಣೆ ಮಾಡಲಿದ್ದಾರೆ ಮತ್ತು ಬೆಳೆ ಹಾನಿ ಪರಿಶೀಲನೆ ಮಾಡುವರು.

5 ಗಂಟೆಗೆ ಬಂಟ್ವಾಳ ಐಬಿಯಲ್ಲಿ ಪಂಜಿಕಲ್ಲಿನಲ್ಲಿ ಭೂಕುಸಿತದಿಂದ ಮೃತಪಟ್ಟವರ ವಾರೀಸುದಾರರಿಗೆ ಪರಿಹಾರ ಚೆಕ್ ವಿತರಿಸಿ, 5.30ಕ್ಕೆ ಉಳ್ಳಾಲ ಸೋಮೇಶ್ವರ ಬಟ್ಟಪ್ಪಾಡಿ ಕಡಲ್ಕೊರೆತ ವೀಕ್ಷಣೆ ಮಾಡಲಿದ್ದಾರೆ.6.15ಕ್ಕೆ ಮೂಲ್ಕಿಯಲ್ಲಿ ಬೆಳೆ ಹಾನಿ, ಪ್ರವಾಹ ಸ್ಥಿತಿ ವೀಕ್ಷಣೆ ಮಾಡಿ ಬಳಿಕ ಉಡುಪಿಗೆ ತೆರಳಲಿದ್ದಾರೆ.

ಜು.13 ರಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ಸಂಜೆ 6.30ಕ್ಕೆ ಉಡುಪಿಯಿಂದ ರಸ್ತೆ ಮಾರ್ಗವಾಗಿ ಹೊರಟು ರಾತ್ರಿ 7.30ಕ್ಕೆ ಮಂಗಳೂರಿನ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, 7.45ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.