Monday, January 20, 2025
ಉಡುಪಿ

ಉಡುಪಿ: ವಾರ ಕಳೆದರೂ ಪತ್ತೆಯಾಗದ ಸೇತುವೆಯಲ್ಲಿ ಬೈಕ್‌ ಇಟ್ಟು ನಾಪತ್ತೆಯಾದ ವ್ಯಕ್ತಿ- ಕಹಳೆ ನ್ಯೂಸ್

ಉಡುಪಿ: ವಾರದ ಹಿಂದೆ ಕಾಪು ಠಾಣಾ ವ್ಯಾಪ್ತಿಯ ಮಣಿಪುರ ದೆಂದುಕಟ್ಟೆ ಅಲೆವೂರು ರಸ್ತೆಯ ಸೇತುವೆಯ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಇನ್ನೂ ಪತ್ತೆಯಾಗಿಲ್ಲ. ಈತ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಪುನೀತ್ (26) ನಾಪತ್ತೆಯಾದ ಯುವಕ. ಇದೀಗ ಆತನ ಸಂಬಂಧಿಕರು ಕಾಪು ಠಾಣೆಯಲ್ಲಿ ಯುವಕ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದು ನಾಪತ್ತೆ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಬೆಳಿಗ್ಗಿನಿಂದಲೇ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ, ಮತ್ತು ಉಡುಪಿ ಜಿಲ್ಲಾ ಅಗ್ನಿ ಶಾಮಕ ದಳದ ಸಿಬ್ಬಂದಿ ಸೇತುವೆಯಿಂದ ಸುಮಾರು 8 ಕಿಲೋ ಮೀಟರ್ ದೂರದವರಗೆ ಹುಡುಕಾಟ ನಡೆಸಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ.

ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಸ್ಕೂಟರ್‌ನಲ್ಲಿ ಆತನ ಪರ್ಸ್, ಪೋನ್ ಇತ್ಯಾದಿ ಸಿಕ್ಕಿದ್ದು, ಅದರ ಆಧಾರದಲ್ಲಿ ಆತನ ಗುರುತು ಪತ್ತೆಯಾಗಿತ್ತು.

ಘಟನೆ ನಡೆದ ದಿನ ಮೃತದೇಹಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ವಿಪರೀತ ಮಳೆಯ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿ ಕೈಬಿಡಲಾಗಿತ್ತು.

ಘಟನೆ ನಡೆದು 6 ದಿನದ ಬಳಿಕವೂ ಮೃತದೇಹ ಪತ್ತೆಯಾಗಿಲ್ಲ. ನದಿ ನೀರಿನ ಹರಿವು ತೀವ್ರವಾಗಿರುವುದರಿಂದ ಕೊಚ್ಚಿಹೋಗಿರುವ ಸಾಧ್ಯತೆ ಇದೆ.