Recent Posts

Sunday, January 19, 2025
ಸುದ್ದಿ

ಹಿಂದೂ ಭಯೋತ್ಪಾದನೆ ತೋರಿಸಲು ಹರಸಾಹಸ ಏತಕ್ಕಾಗಿ ? – ಕಹಳೆ ನ್ಯೂಸ್

ಅಂದು ಕಾಂಚಿಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ, ಸಾಧ್ವಿ ಪ್ರಜ್ಙಾಸಿಂಗ್ ಅನಂತರ ಸ್ವಾಮಿ ಅಸೀಮಾನಂದ, ಅಂದು ರಾ.ಸ್ವ.ಸಂಘ ಇಂದು ಶ್ರೀರಾಮ ಸೇನೆ, ಸನಾತನ ಸಂಸ್ಥೆ ಹೀಗೆ ಸತತ ಹಿಂದೂ ಸಂಘಟನೆಗಳನ್ನು ಒಂದಲ್ಲೊಂದು ಪ್ರಕರಣಗಳಲ್ಲಿ ಸಿಲುಕಿಸಿ ಆರೋಪಿಯ ಪಟ್ಟ ಕಟ್ಟಲು ಶತಾಯಗತಾಯ ಪ್ರಯತ್ನಗಳಾಗುತ್ತಿವೆ. ಈ ಹಿಂದೆ ಅಂತಹ ಅನೇಕರು ನಿರ್ದೋಷಿಯಾಗಿ ಬಿಡುಗಡೆಯಾದರು.

ಆ ಮೂಲಕ ಒಂದೂ ಪ್ರಕರಣಗಳು ಸಾಬೀತಾಗದೇ ಕೇಸರಿ ಭಯೋತ್ಪಾದನೆ ಎಂಬ ಬಾಂಬ್ ಠುಸ್ಸಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚರಗೊಳ್ಳುವ ಈ ಹಿಂದೂ ವಿರೋಧಿಗಳು ಏನಾದರೂ ಮಾಡಿ ಅನ್ಯ ಮತೀಯರನ್ನು ಓಲೈಸಲು ಹಸಿರು ಜೊತೆ ಕೇಸರಿ ಭಯೋತ್ಪಾದನೆಯೂ ಇದೆ ಎಂದು ತೋರಿಸಲು ಹಸರಸಾಹಸಕ್ಕೆ ಈ ಶಕ್ತಿಗಳು ಕೈಹಾಕುತ್ತಿವೆಯೇ ? ಎಂಬ ಸಂದೇಹಕ್ಕೆ ಎಡೆಮಾಡಿಕೊಡುತ್ತದೆ, ಇದೊಂದು ರೀತಿ ದೇಶಭಕ್ತರ ಆತ್ಮಸಮ್ಮಾನಕ್ಕೆ ಘಾಸಿ ಮಾಡಿದಂತಾಗಿದೆ. ಪೊಲೀಸ ಮತ್ತು ನ್ಯಾಯವ್ಯವಸ್ಥೆ ಮೇಲೆ ಇನ್ನೂ ನಂಬಿಕೆ ನಮಗೆ ಉಳಿದಿದೆ. ಆ ಕಾರಣದಿಂದ ಕಳಕಳಿ ಎಂದರೆ ೫ ವರ್ಷಕ್ಕಾಗಿ ಬಂದು ಹೋಗುವವರ ದುಂಬಾಲು ಬೀಳದೇ ತಮ್ಮ ಕರ್ತವ್ಯನಿಷ್ಠೆಯನ್ನು ತೋರಿಸಬೇಕೆಂದು ವಿನಂತಿ.
– ಜನಾರ್ದನ ಗೌಡ, ಪುತ್ತೂರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು