Sunday, January 26, 2025
ಸುದ್ದಿ

ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಹಳೆಯಂಗಡಿ ಗ್ರಾ. ಪಂ. ಅಧ್ಯಕ್ಷರು : ಗ್ರಾಮಸ್ಥರಿಂದ ಪ್ರಶಂಸೆ – ಕಹಳೆ ನ್ಯೂಸ್

ಹಳೆಯಂಗಡಿ: ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕದಿಕೆಯಿಂದ ಸಸಿಹಿತ್ಲುವಿಗೆ ಹಾದು ಹೋಗುವ ರಸ್ತೆಯ ಒಂದು ಕಡೆ ಚರಂಡಿಗೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಕೆಲ ದಿನಗಳಿಂದ ಸುರಿದ ಮಳೆಯ ನೀರು ನಿಂತು ವಾಹನಗಳು ಮತ್ತು ಜನರು ಸಂಚರಿಸಲಾಗದೇ ಪರದಾಡುವಂತಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಗ್ರಾಮಸ್ಥರು ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಅಧ್ಯಕ್ಷೆ ಪೂರ್ಣಿಮಾ ಹಾಗೂ ಉಪಾಧ್ಯಕ್ಷರಾದ ಅಶೋಕ್ ಬಂಗೇರ, ಹಳೆಯಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಹಾಗೂ ಸದಸ್ಯರುಗಳಾದ ಸತೀಶ್ ಕೊಳುವೈಲು ಮತ್ತು ವಿನೋದ್ ಕುಮಾರ್ ಕೊಳುವೈಲು ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ರಸ್ತೆಯನ್ನು ಅಗೆದು ಸಿಮೆಂಟ್ ಪೈಪುಗಳನ್ನು ಅಳವಡಿಸಿ ಸರಳವಾಗಿ ನೀರು ಚರಂಡಿಗೆ ಹರಿದು ಹೋಗುವಂತೆ ಮಾಡಿ ರಸ್ತೆ ಸಂಚಾರ ಸುಗಮಗೊಳಿಸಿದರು. ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮಾತ್ರವಲ್ಲದೇ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು