Sunday, January 19, 2025
ಸುದ್ದಿ

ಶಿರಾಡಿ ಘಾಟ್ ರೆಡಿಯಾಗಲು ತಾಂತ್ರಿಕ ವಿಘ್ನ ; ಸಂಚಾರ ಮತ್ತಷ್ಟು ವಿಳಂಬ – ಕಹಳೆ ನ್ಯೂಸ್

ಬೆಳ್ತಂಗಡಿ ಜೂ 28: ಚಾರ್ಮಾಡಿ ಘಾಟ್ ಕುಸಿತದಿಂದಾಗಿ ಶಿರಾಡಿ ಘಾಟ್ ಶೀಘ್ರದಲ್ಲಿಯೇ ಪೂರ್ಣಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು.

ಹೀಗಾಗಿ ಜುಲೈ 5 ರ ಬಳಿಕ ಈ ಮಾರ್ಗವನ್ನು ಸಂಚಾರಕ್ಕಾಗಿ ಮುಕ್ತಗೊಳಿಸಲು ತಯಾರಿ ನಡೆಸಿತ್ತು. ಆದರೆ ಈ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದ್ದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಇನ್ನು ಹತ್ತು ದಿನ ತಗಲುವ ಸಾಧ್ಯತೆಗಳು ಇವೆ. ಕಾರಣ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಜರ್ಮನಿಯಿಂದ ಅಮದು ಮಾಡಿಕೊಂಡಿರುವ ಸೆನ್ಸಾರ್ ಪೇವರ್ ಯಂತ್ರದಲ್ಲಿ ತಾಂತ್ರಿಕ ದೋಷ ಹಾಗೂ ಮಳೆಯಿಂದಾಗಿ ನಿರ್ಮಾಣವಾಗಿರುವ ಅನಾನುಕೂಲ ವಾತಾವರಣ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಿರಾಡ್ ಘಾಟ್ ನ ಎರಡನೇ ಹಂತದ ಕಾಮಗಾರಿಯ ಗುತ್ತಿಗೆ ಪಡೆದಿರುವ ಮಂಗಳೂರಿನ ಓಷನ್ ಕನ್ ಸ್ಟ್ರಕ್ಷನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯೂ ಜರ್ಮನಿಯ ವಿರ್ಟ್ಜರ್ ಕಂಪನಿಯಿಂದ 10 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೆನ್ಸ್ರ್ ಪೇವರ್ ಯಂತ್ರ ಆಮದು ಮಾಡಿಕೊಂಡಿದೆ. ಈ ಯಂತ್ರ ತಾಂತ್ರಿಕ ದೋಷದಿಂದ ಕಳೆದ ಕೆಲವು ವಾರ ಸ್ಥಗಿತಗೊಂಡಿತ್ತು. ಇದು ಕಾಮಗಾರಿ ವಿಳಂಬಕ್ಕೆ ಕಾರಣ . ಇದು ಸ್ಠಳೀಯ ತಾಂತ್ರಿಕ ಸಿಬ್ಬಂದಿ ಮಾಡಿದ ಪ್ರಯತ್ನ ಕಾರ್ಯ ಸಫಲವಾಗಿರಲಿಲ್ಲ. ಬಳಿಕ ಜರ್ಮನ್ ನಿಂದ ಅದೇ ಕಂಪನಿಯ ತಂತ್ರಜ್ಞರು ಬಂದು ದುರಸ್ತಿ ಮಾಡಿದ ಬಳಿಕ ಮತ್ತೆ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿದೆ.