Recent Posts

Monday, January 20, 2025
ಅಂತಾರಾಷ್ಟ್ರೀಯಸುದ್ದಿ

” #no2hijab : ನೋ2ಹಿಜಾಬ್ ” ಕಡ್ಡಾಯ ಹಿಜಾಬ್ ವಿರುದ್ದ ಇರಾನ್ ಮಹಿಳೆಯರ ಆಕ್ರೋಶ ; ಹಿಜಾಬ್‌ ತೆಗೆದು ಫೋಟೋ, ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್..! – ಕಹಳೆ ನ್ಯೂಸ್

ಇರಾನ್​ : ಕಡ್ದಾಯವಾಗಿ ಮಹಿಳೆಯರು ಹಿಜಾಬ್ ಧರಿಸಬೇಕು ಎಂಬ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿಗೆ ಇರಾನ್ ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹ್ಯಾಷ್ ಟ್ಯಾಗ್ ನೋ2ಹಿಜಾಬ್ ಎಂಬ ಅಭಿಯಾನ ಆರಂಭಿಸಿದ್ದಾರೆ.

ಮಾತ್ರವಲ್ಲದೇ ಇರಾನ್ ಮಹಿಳೆಯರು ತಾವು ಹಿಜಾಬ್‌ಗಳನ್ನು ತೆಗೆಯುತ್ತಿರುವ ಫೋಟೋ, ವಿಡಿಯೋಗಳನ್ನು ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್ ಮಾಡಿ ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಜುಲೈ 12ನ್ನು “ಹಿಜಾಬ್ ಮತ್ತು ಪರಿಶುದ್ಧತೆಯ ದಿನ” ಎಂದು ಇರಾನ್ ನಲ್ಲಿ ಷೋಷಿಸಲಾಗಿದ್ದು ಮಹಿಳೆಯರು ಹಿಜಾಬ್ ಧರಿಸಲು ಒತ್ತಾಯಿಸುವ ನಿಯಮಗಳ ಕುರಿತು ಕಾರ್ಯಕ್ರಮ ಆಯೋಜಿಸಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಮಹಿಳೆಯರ ಹಕ್ಕುಗಳನ್ನು ಇರಾನ್‌ನಲ್ಲಿ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದ್ದು, ಅಲ್ಲಿನ ಎಲ್ಲಾ ಮಹಿಳೆಯರಿಗೆ ಸಾರ್ವಜನಿಕವಾಗಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಹಿಜಾಬ್ ಧರಿಸದಿರುವವರು ಅಥವಾ ಹಿಜಾಬ್ ಧರಿಸಿ ತಮ್ಮ ಕೂದಲನ್ನು ಪ್ರದರ್ಶಿಸುವವರಿಗೆ ದಂಡದಿಂದ ಹಿಡಿದು ಜೈಲು ಶಿಕ್ಷೆಯವರೆಗೆ ಸಜೆಯನ್ನು ನೀಡಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ವಿರೋಧಿಸಿ ಮಹಿಳೆಯರು ಮತ್ತು ಕೆಲವೆಡೆ ಪುರುಷರು ಕೂಡಾ, ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸುವ ಇರಾನ್‌ನ ಕಾನೂನಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.