Recent Posts

Monday, January 20, 2025
ಮೂಡಬಿದಿರೆಸುದ್ದಿ

ರಾಷ್ಟ್ರಮಟ್ಟದಲ್ಲಿ ನಡೆದ ಐಐಟಿ (ಜೆಇಇ ಮೈನ್ಸ್) ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ಮೂಡಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ – ಕಹಳೆ ನ್ಯೂಸ್

ಮೂಡಬಿದಿರೆ : ತಾಂತ್ರಿಕ ಶಿಕ್ಷಣದ ದಾಖಲಾತಿಗೆ ರಾಷ್ಟ್ರಮಟ್ಟದಲ್ಲಿ ನಡೆದ ಐಐಟಿ (ಜೆಇಇ ಮೈನ್ಸ್) ಅರ್ಹತಾ ಸುತ್ತಿನ ಪರೀಕ್ಷೆಯಲ್ಲಿ ಮೂಡಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ಸಮಹಿತ ರಾಜೇಂದ್ರ ಹೆಗ್ಡೆ (99.4828796), ಲಕ್ಶ್ಮೀಶ ಸಿ ನಾೈಕ್ (99.4762917), ಸಿ ಜೆ ಸಂಹಿತ್ (98.8035951), ಕಾರ್ತಿಕ್ ವಿ ಹೆಗ್ಡೆ (98.1792347), ಸಂಕಲ್ಪ ಬಿ ಆರ್ (98.0621839), ಸುಧನ್ವ ಬಿ ಆರ್ (96.2366598), ಪ್ರೀತಿ ತೋಟಪ್ಪ ಕೋರಿಶೆಟ್ಟರ್ (95.8492788), 8. ರಂಜನ್ ಹೆಚ್ ಆರ್ (94.8144068) ಪಿ ಎಸ್ ಚಿರಾಗ್ ಚಿನ್ನಪ್ಪ (94.5956400) ಪ್ರೇಕ್ಷ ಅರವಿಂದ್ (94.4068819) ವರುಣ್ ಕುಮಾರ್ ಎ ಸಿ (92.6031512) ಹಾಗೂ ರಕ್ಷಿತ ಆರ್ (91.8843327) ಇವರು ಅತ್ಯುತ್ತಮ ಅಂಕಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರೀಕ್ಷೆ ಬರೆದ ಒಟ್ಟು 32 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಅರ್ಹತೆ ಗಳಿಸಿದ್ದು, ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ, ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕ ರಾಮಮೂರ್ತಿ, ಉಪನ್ಯಾಸಕರಾದ ಡಾ ದಯಾನಂದ, ಭಾಸ್ಕರ್ ಕುಮಾರ್, ಸುಬ್ಬಾರೆಡ್ಡಿ ಹಾಗೂ ಶೈಲೇಶ್ ಶೆಟ್ಟಿ ಇವರು ಹರ್ಷ ವ್ಯಕ್ತಪಡಿಸಿರುತ್ತಾರೆ.