Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜು.15ರಂದು ಮುಳಿಯ ಜ್ಯುವೆಲ್ಸ್ ಹಾಗೂ ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಭಕ್ತಿಗೀತೆ ಸ್ಪರ್ಧೆ – ಕಹಳೆ ನ್ಯೂಸ್

ಪುತ್ತೂರು: ಸಮುದಾಯ ಬಾನುಲಿ ರೇಡಿಯೋ ಪಾಂಚಜನ್ಯ 90.8 ಎಫ್‍ಎಂ ಇನ್ನರ್ ವೀಲ್ ಮತ್ತು ಮುಳಿಯ ಜ್ಯುವೆಲ್ಸ್ ಸಹಯೋಗದಲ್ಲಿ ಜುಲೈ 15ರಂದು ಬೆಳಗ್ಗೆ 9 ಗಂಟೆಗೆ ನಾಗರ ಪಂಚಮಿ ಪ್ರಯುಕ್ತ ವಿಶೇಷ ಭಕ್ತಿಗೀತೆ ಸ್ಪರ್ಧೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಆಯೋಜಿಸಿದೆ.

ಭಕ್ತಿಗೀತೆಯನ್ನು ಹಾಡುವ ಅವಧಿ 3+1 ನಿಮಿಷ ಆಗಿದ್ದು 1ರಿಂದ 4ನೇ ತರಗತಿ ಮತ್ತು 5ರಿಂದ 7ನೇ ತರಗತಯ ಮಕ್ಕಳಿಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗದೇವರ ಮತ್ತು ನಾಗರ ಪಂಚಮಿ ಹಬ್ಬದ ವಿಶೇಷತೆ ಕುರಿತ ಸ್ವರಚಿತ ಕವನ ವಾಚನ ಸ್ಪರ್ಧೆ (3+1 ನಿಮಿಷ) ಕೂಡ ನಡೆಯಲಿದೆ. ಕವನಗಳು ಕನಿಷ್ಠ 12 ಸಾಲು, ಗರಿಷ್ಠ 22 ಸಾಲಿನೊಳಗೆ ಇರಬೇಕಾಗುತ್ತದೆ. 8ರಿಂದ 10ನೇ ತರಗತಿಯ ಮಕ್ಕಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಸ್ಪರ್ಧೆಯು ರೇಡಿಯೋ ಪಾಂಚಜನ್ಯದ ಕಚೇರಿಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 8050809885