Monday, November 25, 2024
ಸುದ್ದಿ

ಬೈಂದೂರು: ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತ ದೇಹ ಪತ್ತೆ ಪ್ರಕರಣ, ಕೊಲೆಯೋ, ಆತ್ಮಹತ್ಯೆ ಯೋ…..?– ಕಹಳೆ ನ್ಯೂಸ್

ಕುಂದಾಪುರ : ಬೈಂದೂರು ಸಮೀಪದ ಒತ್ತಿನೆಣೆಯ ಹೆನ್ ಬೇರು ಎಂಬಲ್ಲಿ ಕಾರು ಹಾಗೂ ಕಾರಿನೊಳಗೆ ಮೃತದೇಹವೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಇದೀಗ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ.

ಈ ಹಿಂದೆ, ಘಟನೆಯಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾದ ಮೃತ ದೇಹವನ್ನು ಕಾರ್ಕಳದ ಶಿಲ್ಪಾ ಎನ್ನುವ ಮಹಿಳೆಯದ್ದಾಗಿದೆ ಎನ್ನಲಾಗಿತ್ತು. ಆದರೆ ಇದೀಗ ಶಿಲ್ಪ ಅವರು ಜೀವಂತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲದೆ ಸಂಪೂರ್ಣ ಸುಟ್ಟು ಹೋದ ಕಾರು ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರಿಗಾರ್ ಎಂಬವರಿಗೆ ಸೇರಿದ್ದು ಎಂದು ಪೊಲೀಸರು ಪತ್ತೆಹಚ್ಚಿದ್ದರು. ಹಾಗೂ ಕಾರಿನ ಮಾಲಕ ಸದಾನಂದ ಶೇರಿಗಾರ್ ಅವರೂ ಕೂಡಾ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು ಆದರೆ ವಾಸ್ತವವಾಗಿ ಅವರೂ ಕೂಡಾ ಊರಲ್ಲೇ ಇದ್ದು ನಾಪತ್ತೆಯಾಗಿಲ್ಲ ಎಂಬುದು ತಿಳಿದು ಬಂದಿದೆ. ಹತ್ತು ವರ್ಷಗಳ ಹಿಂದೆ ಕಾರು ಮಾರಾಟ ಮಾಡಿದ್ದರು. ಆದರೆ ವಾಹನ ದಾಖಲೆ ಪತ್ರಗಳನ್ನು ಮಾರಾಟಡಿದ ವ್ಯಕ್ತಿಗೆ ಬದಲಾಯಿಸಿಲ್ಲಾ ಎನ್ನಲಾಗಿದೆ.  ಶಿಲ್ಪಾ ಅವರ ಪತಿ ಮೃತಪಟ್ಟಿದ್ದು, ಅವರು ಸದಾನಂದ ಶೇರಿಗಾರ್ ಅವರಿಗೆ ಆತ್ಮೀಯರಾಗಿದ್ದರು ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರಿನ ಚೆಸ್ಸಿ ನಂಬರ್ ಮೂಲಕ ಕಾರಿನ ನಂಬರ್ ಪತ್ತೆ ಮಾಡಿ ಪರಿಶೀಲನೆ ನೆಡೆಸಿದಾಗ ಕಾರು ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್ ಗೇಟಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗಿರುವುದು ತಿಳಿದುಬಂದಿದೆ. ಮಾತ್ರವಲ್ಲದೆ ಸಾಸ್ತಾನ ಟೋಲ್ ಗೇಟ್ ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಗೆ ಹಣ ನೀಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಕಾರಿನಲ್ಲಿ ಮಹಿಳೆಯೂ ಇದ್ದಿರುವುದು ಖಾತರಿಯಾಗಿದೆ. ಆದರೆ ಆ ಮಹಿಳೆ ಯಾರೂ ಎಂಬುದು ಈಗ ಸವಾಲಾಗಿ ಉಳಿದಿದೆ. ಮಾತ್ರವಲ್ಲದೆ ಆಕೆಯನ್ನು ಕಾರಿನಲ್ಲಿದ್ದವರು ಸೇರಿ ಕೊಲೆಗೈದು ಬಳಿಕ ಶವ ಸಹಿತ ಕಾರನ್ನು ಬೈಂದೂರು ಸಮೀಪದ ಒತ್ತಿನೆಣೆಯ ಹೆನ್ ಬೇರು ಎಂಬಲ್ಲಿಗೆ ತಂದು ಸುಟ್ಟಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮಾತ್ರವಲ್ಲದೆ ಕಾರಿನ ಎಲ್ಲಾ ಡೋರ್ ಗಳು ಲಾಕ್ ಆಗಿದ್ದು, ಕಾರಿನ ಕೀ ಕಂಡು ಬಂದಿರುವುದಿಲ್ಲ. ಘಟನೆ ನಡೆದ ಸ್ಥಳದ ಸಮೀಪ ಕಾರಿನ ಸ್ವಲ್ಪ ದೂರದಲ್ಲಿ ಪೆಟ್ರೋಲ್ ವಾಸನೆ ಬರುವ 2 ಲೀಟರ್ ನ ಪ್ಲಾಸ್ಟಿಕ್ ಬಾಟಲಿ ಬಿದ್ದು ಕೊಂಡಿದ್ದೂದು ಕಂಡು ಬಂದಿದೆ.

ಈ ಹಿಂದೆ ಲಭ್ಯವಾದ ಮಾಹಿತಿಗಳಲ್ಲಿ ಮೃತರು ಹಾಗೂ ನಾಪತ್ತೆಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳು ಜೀವಂತವಾಗಿರುವುದರಿಂದ ಪ್ರಕರಣದಲ್ಲಿ ಭಾಗಿಯಾಗಿರುವ ಮೂರನೇಯವರು ಯಾರು ಹಾಗೂ ಮೃತಪಟ್ಟಿರುವ ಮೂರನೇ ಮಹಿಳೆ ಅಥವಾ ವ್ಯಕ್ತಿ ಯಾರು ಎಂಬುದು ಕಗ್ಗಂಟಾಗಿದೆ. ಸದ್ಯ ಪ್ರಕರಣದಲ್ಲಿ ಒಂದೊಂದೇ ಸುಳಿವು ಸಿಗುತ್ತಿವೆಯಾದರೂ ಅಸಲಿ ಸತ್ಯ ಮಾತ್ರ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವಾರು ಕ್ರಿಮಿನಲ್ ಹಿನ್ನೆಲೆಯ ಸರ್ವೆಯರು ಸದಾನಂದ ಸೇರಿಗಾರ: ಗುತ್ತಿಗೆ ಆಧಾರದಲ್ಲಿ ಸರ್ವೆ ಇಲಾಖೆಯಲ್ಲಿ ಕೆಲಸದಲ್ಲಿ ಇದ್ದು, ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದ್ದು ಅದೇ ಹಿನ್ನೆಲೆಯಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆಯಾಗುವ ಸಾಧ್ಯತೆ ಇತ್ರು ಎನ್ನಲಾಗಿದೆ.

ಇದರಿಂದ ಹೆದರಿದ ಸದಾನಂದ ಈ ರೀತಿಯ ನಾಟಕವಾಡಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರೆ ಎಂದು ತಿಳಿದು ಬಂದಿದೆ.