ಮಂಗಳೂರು : ಕಾಸರಗೋಡು ಮೂಲದ ೨ ಕುಟುಂಬಗಳು ದುಬೈನಿಂದ ನಿಗೂಢವಾಗಿ ನಾಪತ್ತೆಯಾಗಿದ್ದು ಇವರು ಉಗ್ರ ಸಂಘಟನೆ ಐಸಿಸ್ ಸೇರಿರುವ ಶಂಕೆ ದಟ್ಟವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾದಳ ಕಾಸರಗೋಡನ್ನು ಗುರಿಯಾಗಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದೆ.
ನಾಪತ್ತೆಯಾಗಿರುವ ಕುಟುಂಬಗಳಲ್ಲಿ ೬ ಜನ ಮಕ್ಕಳು ಕೂಡಾ ಸೇರಿದ್ದಾರೆ. ದುಬೈನಲ್ಲಿ ಮೊಬೈಲ್ ಅಂಗಡಿ ವ್ಯಾವಹಾರ ನಡೆಸುವ ಸದಬ್, ಆತನ ಪತ್ನಿ ನಸೀರಾ ಹಾಗೂ ೩ ಮಕ್ಕಳು ನಾಪತ್ತೆಯಾಗಿದವರಲ್ಲಿ ಸೇರಿದ್ದಾರೆ. ಮತ್ತೊಂದು ಕುಟುಂಬದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಈಗಾಗಲೇ ಸದಬ್ ಹಾಗೂ ನಾಪತ್ತೆಯಾದ ಎಲ್ಲಾ ೧೧ ಜನ ಐಸಿಸ್ ಉಗ್ರರ ತಾಣ ಯೆಮೆನ್‌ನ ಹದ್ರಮಂತ್‌ಗೆ ತಲುಪಿದ ಬಗ್ಗೆ ಸದಬ್ ಯಾರದ್ದೋ ಜೊತೆ ಮತಾನಾಡುವ ಆಡಿಯೋ ಕ್ಲಿಪೊಂದು ವಾಟ್ಸ್ ಆಪ್ ಮೂಲಕ ಹರಿದಾಡುತ್ತಿದೆ. ರಾಷ್ಟ್ರೀಯ ತನಿಖಾದಳ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದೆ. ೨೦೧೬ರಿಂದ ೨೧ ಜನ ಕೇರಳದವರು ಐಸಿಸ್ ಉಗ್ರ ಸಂಘಟನೆ ಸೇರಿದ್ದು ಇದರಲ್ಲಿ ೫ ಜನ ಅಮೇರಿಕ ಸೇನೆಯ ದಾಳಿಗೆ ಮೃತರಾಗಿದ್ದನ್ನು ಸ್ಮರಿಸಬಹುದಾಗಿದೆ.