Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪ್ರಧಾನಿ ಕಚೇರಿಗೆ ತಲುಪಿದ ಬ್ರಹ್ಮರಕೂಟ್ಲು ಟೋಲ್‍ಗೇಟ್ ರಸ್ತೆ ದುರವಸ್ಥೆಯ ಫೋಟೋ– ಕಹಳೆ ನ್ಯೂಸ್

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 75ರ ಟೋಲ್‍ಗೇಟ್ ಹಾದುಹೋಗುವ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ರಸ್ತೆಯ ದುರವಸ್ಥೆ ಫೋಟೋಈಗ ಪ್ರಧಾನಿ ಕಚೇರಿ ಹಾಗೂ ಕರ್ನಾಟಕ ಮುಖ್ಯಮಂತ್ರಿಯ ಕಚೇರಿಗೆ ತಲುಪಿದೆ.

ಟೋಲ್ ಗೇಟ್ ಹಾದುಹೋಗುವ ರಸ್ತೆ ಪೂರ್ತಿ ಹೊಂಡ ಗುಂಡಿ ಬಿದ್ದು ಹಾನಿಗೀಡಾಗಿದ್ದು, ಸಮೀಪದಲ್ಲೇ ಹೆದ್ದಾರಿಯ ಟೋಲ್ ಸಂಗ್ರಹ ಕೇಂದ್ರವಿದ್ದರೆ, ಇದನ್ನು ಅಣಕಿಸುವಂತೆ ಡಾಂಬರು ಎದ್ದು ಹೋದ ರಸ್ತೆ ಇದೆ. ರಸ್ತೆ ಸರಿ ಇಲ್ಲದಿದ್ದರೂ ಅದನ್ನು ದುರಸ್ತಿಪಡಿಸುವ ಗೋಜಿಗೆ ಹೋಗದೆ ಟೋಲ್ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿರುವ ಸನ್ನಿವೇಶವನ್ನು ಬಿಂಬಿಸುವ ಫೋಟೋವನ್ನು ರಾಜೇಶ್ ಕೃಷ್ಣಪ್ರಸಾದ್ ಪಿಎಂಒ ಇಂಡಿಯಾ ಕಚೇರಿಯ ಪೋರ್ಟಲ್‌ಗೆ ಮೇಲ್ ಮಾಡಿದ್ದು, ಅದಕ್ಕೆ ಸ್ವೀಕೃತಿ ಪತ್ರ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ರೀತಿ ರೋಶನ್ ಕಮಾ ಕುಂಬ್ಳೆ ಎಂಬವರು ಪ್ರಧಾನಿ ಕಾರ್ಯಾಲಯ ಮಾತ್ರವಲ್ಲ ಕರ್ನಾಟಕ ಮುಖ್ಯಮಂತ್ರಿಗಳಿಗೆ ಟ್ವಿಟ್ ಮೂಲಕ ಟ್ಯಾಗ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು