Monday, January 20, 2025
ಕ್ರೈಮ್ರಾಜಕೀಯರಾಷ್ಟ್ರೀಯಸುದ್ದಿ

ಇನ್‌ಸ್ಟಾಗ್ರಾಂನಲ್ಲಿ ನೂಪುರ್ ಶರ್ಮಾ ಫೋಟೋ ಹಾಕಿದ್ದಕ್ಕೆ ಉದ್ಯಮಿಗೆ ಕೊಲೆ ಬೆದರಿಕೆ ; ಮೊಹಮ್ಮದ್ ಅಯಾನ್ ಸೇರಿದಂತೆ ಮೂವರು ಜಿಹಾದಿಗಳ ಬಂಧನ – ಕಹಳೆ ನ್ಯೂಸ್

ಸೂರತ್, ಜು 16 : ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮೂವರನ್ನು ಗುಜರಾತ್‌ನ ಸೂರತ್ ನಗರದಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮೊಹಮ್ಮದ್ ಅಯಾನ್ ಅತಶ್ಬಾಜಿವಾಲಾ, ರಶೀದ್ ಭುರಾ ಮತ್ತು ಅಲಿಯಾ ಮೊಹಮ್ಮದ್ ಬಂಧಿತರು. ಬಂಧಿತರೆಲ್ಲರೂ ಸೂರತ್ ನಿವಾಸಿಗಳು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಅವಮಾನ) ಮತ್ತು 506, 507 (ಅಪರಾಧ ಬೆದರಿಕೆ) ಅಡಿಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತರ ನಾಲ್ವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮ್ಯೂಸ್‌ಮೆಂಟ್ ಪಾರ್ಕ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದರ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ನಿರ್ವಹಿಸುತ್ತಿರುವವರು ನೂಪುರ್ ಶರ್ಮಾ ಫೋಟೋವನ್ನು ಹಾಕಿದ್ದರು. ಬಳಿಕ ಕೂಡಲೇ ಅಳಿಸಲಾಗಿದೆ. ಆದರೆ ಅಮ್ಯೂಸ್‌ಮೆಂಟ್ ಪಾರ್ಕ್‌ ನಡೆಸುತ್ತಿರುವ ಉದ್ಯಮಿಗೆ ಏಳು ಜನರಿಂದ ಉದ್ಯಮಿಗೆ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಉಮ್ರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆ. ಆರ್. ಚೌಧರಿ ತಿಳಿಸಿರುವುದಾಗಿ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು