Tuesday, January 21, 2025
ಸುದ್ದಿ

ಮೂಡಬಿದಿರೆ : ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ – ಕಹಳೆ ನ್ಯೂಸ್

ಮೂಡಬಿದಿರೆ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜರಗಿದ ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕರ ಹಾಗೂ ಪ್ರೌಢ ವಿಭಾಗದ ಬಾಲಕಿಯರ ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿವೆ. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಇವರು ಪ್ರಶಸ್ತಿಯನ್ನು ವಿತರಿಸಿದರು. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಇವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜೇತರ ವಿವರ ಈ ಕೆಳಗಿನಂತಿದೆ:- 
17ರ ವಯೋಮಾನದ ಒಳಗಿನ ಬಾಲಕಿಯರ ವಿಭಾಗ: ಮೌಲ್ಯ ವೈ ಆರ್ ಜೈನ್, ನಮ್ರತಾ , ಯಶಸ್ವಿನಿ ಎಸ್, ನಿಹಾರಿಕ ಪಿ ಜೆ
14ರ ವಯೋಮಾನದ ಒಳಗಿನ ಬಾಲಕರ ವಿಭಾಗ: ಮನ್ವಿತ್ ವೈ, ಆರ್ ಜೈನ್, ದರ್ಶನ್ ದ್ಯಾನೋಪಂತ್, ಸೃಜನ್ ಎಸ್ ಎಸ್
14ರ ವಯೋಮಾನದ ಒಳಗಿನ 8ನೇ ತರಗತಿ ಬಾಲಕರ ವಿಭಾಗ: ಸೃಜನ್ ಸುರೇಶ್ ಯಾರಡ್ಡಿ, ಅರ್ನವ್ ಜೈನ್
14ರ ವಯೋಮಾನದ ಒಳಗಿನ 8ನೇ ತರಗತಿ ಬಾಲಕಿಯರ ವಿಭಾಗ: ನೀತು ಎನ್

ಜಾಹೀರಾತು
ಜಾಹೀರಾತು
ಜಾಹೀರಾತು