Saturday, November 23, 2024
ಕ್ರೀಡೆ

ಕಬಡ್ಡಿ ಮಾಸ್ಟರ್ಸ್​​​​​ ​​ದುಬೈ: ಇರಾನ್ ​ಸದೆಬಡೆದು ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತ – ಕಹಳೆ ನ್ಯೂಸ್

ದುಬೈ: ಕಬಡ್ಡಿ ಮಾಸ್ಟರ್ಸ್​ ದುಬೈ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಸೌತ್​ ಕೊರಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಫೈನಲ್​ ಪ್ರವೇಶ ಪಡೆದುಕೊಂಡಿದ್ದ ಅಜಯ್​ ಠಾಕೂರ್​ ನೇತೃತ್ವದ ಭಾರತ ಫೈನಲ್​ನಲ್ಲಿ ಇರಾನ್​ ತಂಡವನ್ನ ಸದೆಬಡೆದು ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಆರಂಭದಿಂದಲೂ ಇರಾನ್​ ಮೇಲೆ ಪ್ರಾಬಲ್ಯ ಸಾಧಿಸಿದ ಭಾರತ ಇರಾನ್ ವಿರುದ್ಧ 44-26 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದು, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದೆ. ನಾಯಕನ ಆಟವಾಡಿದ ರೇಡರ್‌ ಅಜಯ್‌ ಠಾಕೂರ್‌ 9 ರೇಡಿಂಗ್‌ ಅಂಕ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಪ್ರಥಮಾರ್ಧಕ್ಕೆ ಭಾರತ ರೇಡಿಂಗ್‌ ಮತ್ತು ಕ್ಯಾಚಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್‌ ತಿರುಗೇಟು ನೀಡುವ ಯತ್ನ ನಡೆಸಿತು. ಇದರ ನಡುವೆ ಮಿಂಚಿದ ರಿಶಾಂಕ್‌, ಠಾಕೂರ್‌ ಮತ್ತು ಗೋಯಟ್‌ ಭಾರತದ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಮೊದಲಾರ್ಧಕ್ಕೆ 18-11ರಲ್ಲಿ ಮುನ್ನಡೆ ಕಂಡುಕೊಂಡ ಭಾರತ, ಕೆಲವು ಬಾರಿ ಹೊಂದಾಣಿಕೆ ಆಟ ಪ್ರದರ್ಶಿಸುವಲ್ಲಿ ಎಡವಿದರೂ ಎದುರಾಳಿ ತಂಡಕ್ಕೆ ಅಂಕ ಬಿಟ್ಟುಕೊಡಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಭಾರತ ತಾನೂ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಜತೆಗೆ ಅಜೇಯರಾಗಿ ಚಾಂಪಿಯನ್​ ಆಗಿ ಹೊರಹೊಮ್ಮಿರುವುದು ಗಮನಾರ್ಹ.