Monday, January 20, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ರೇವ್ ಪಾರ್ಟಿ…!? ಗಾಂಜ ಸೇವಿಸಿ, ಅನುಚಿತ ವರ್ತನೆ ; ಪುತ್ತೂರಿನ ಪ್ರತಿಷ್ಠಿತ ಸ್ಪಾ ಆಂಡ್ ಸೇಲೂನ್ ಮಾಲಕ ಕನಿಷ್ಕ ಶೆಟ್ಟಿ ಸಹಿತ ಐದು ಮಂದಿಯ ಹೆಡೆಮುರಿಕಟ್ಟಿದ ಎಸ್.ಐ. ರಾಜೇಶ್ ಕೆ.ವಿ. – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನಲ್ಲಿ ಪದೇ ಪದೇ ಗಾಂಜ ಸೇವನೆ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇಂಹದ್ದೇ ಒಂದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ಪುತ್ತೂರಿನ ಪ್ರತಿಷ್ಠಿತ ಸ್ಪಾ & ಸೇಲೂನ್ ನ ಮಾಲೀಕ ಕನಿಷ್ಕ ಶೆಟ್ಟಿ ಸಹಿತ ಐದು ಮಂದಿ ಗಾಂಜಾ ಸೇವಿಸಿ, ರೇವ್ ಪಾರ್ಟಿಯಲ್ಲಿ ತೊಡಗಿ, ಸಾರ್ವಜನಿಕ ಸ್ಥಳದಲ್ಲಿ ಕಿರಿಕ್ ಮಾಡಿ ಪುತ್ತೂರು ಪೋಲೀಸರ ಅತಿಥಿಗಳಾಗಿದ್ದಾರೆ

ಪ್ರಕರಣದ ವಿವರ :

ಜಾಹೀರಾತು
ಜಾಹೀರಾತು
ಜಾಹೀರಾತು

ದಿನಾಂಕ 15-07-2022 ರಂದು ಸಾಯಂಕಾಲ ರಾಜೇಶ್ ಕೆವಿ ಪೊಲೀಸ್ ಉಪನಿರೀಕ್ಷಕರು ಪುತ್ತೂರು ನಗರ ಠಾಣೆಯವರಯ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯದಲ್ಲಿ 18:30 ಗಂಟೆಗೆ ಪುತ್ತೂರು ಕಸ್ಬಾ ಗ್ರಾಮದ ನಂದಿಲ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಐದು ಜನರು ಸಾರ್ವಜನಿಕರನ್ನುದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ತೊಂದರೆ ಉಂಟು ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪ್ರಕಾರ ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ನಂದಿಲ ಎಂಬಲ್ಲಿ ತಲುಪಿ ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಐದು ಜನ ಅನುಚಿತವಾಗಿ ವರ್ತಿಸುತ್ತಾ ಸಾರ್ವಜನಿಕರಿಗೆ ಮುಜುಗರವಾದ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದೆ. ಅವರುಗಳನ್ನು ವಿಚಾರಿಸಲಾಗಿ ಅವರುಗಳು ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ಸಂಶಯ ಕಂಡು ಬಂದಿರುವುದರಿಂದ ಅವರನ್ನು ವಶಕ್ಕೆ ಪಡೆದು, ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದವರೆಂದು ಸಂಶಯ ಬಂದ ಮೇರೆಗೆ ಆಪಾದಿತರನ್ನು ಠಾಣೆಗೆ ತಂದು ಈ ದಿನ ದಿನಾಂಕ: 16-07-2022 ರಂದು ವೈದ್ಯಕೀಯ ಪರೀಕ್ಷೆಗೊಳಡಿಸಲು ವೈದ್ಯಾಧಿಕಾರಿಯವರು ಕೆಎಸ್‌ ಹೆಗ್ಡೆ ಆಸ್ಪತ್ರೆ ದೇರಳ ಕಟ್ಟೆ ಮಂಗಳೂರು ಇಲ್ಲಿಗೆ ಕೋರಿಕೆ ಪತ್ರದೊಂದಿಗೆ ಕಳುಹಿಸಿಕೊಟ್ಟು, ಆಪಾದಿತರುಗಳನ್ನು DEPARTMENT OF FORENSIC MEDICINE AND TOXICOLOGY K.S HEGDE ಯ ಆಸ್ಪತ್ರೆಯ ವೈದ್ಯಾಧಿಕಾರಿಯವರುಗಳು ಪರೀಕ್ಷೆಗೊಳಪಡಿಸಿ ಇವರೆಲ್ಲರೂ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

ಆರೋಪಿತರು ಯಾರು ಯಾರು..!?

1) ಕನಿಷ್ಕ ಶೆಟ್ಟಿ ಪ್ರಾಯ ದೆ: ನಂದಕಿರಣ ಶೆಟ್ಟಿ ವಾಸ: ಕನಿಷ್ಕ ನಿವಾಸ ಪರ್ಪುಂಜ ಮನೆ ಒಳಮೊಗರು ಗ್ರಾಮ ಪುತ್ತೂರು ತಾಲೂಕು, 2) ಪ್ರಜ್ವಲ ಪ್ರಾಯ: 28 ವರ್ಷ ತಂದೆ: ಎಂ ಕೃಷ್ಣ ವಾಸ: ಸಿಂಗಾಣಿ ಮನೆ ಕರ್ಕುಂಜ ಬಪ್ಪಳಿಗೆ ಅಂಚೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು, 3) ಹಿತೇಶ್ ನಾಯ್ಕ್ ಪ್ರಾಯ: 19 ವರ್ಷ ತಂದೆ: ಸುರೇಶ ನಾಯ್ಕ್ ವಾಸ: ದ್ವಾರಕಾ ಮನೆ ಕೊಡಿಪ್ಪಾಡಿ ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು 4) ನವನೀತ್ ಎಸ್ ಬಿ ಪ್ರಾಯ: 23 ವರ್ಷ ತಂದೆ: ಸುಧಾಕರ ವಾಸ: ನಂದಿಲ ಮನೆ ಹಾರಾಡಿ ಅಂಚೆ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ಮತ್ತು 5) ಕಿಶನ್ ಕುಮಾರ್ ಪ್ರಾಯ: 24 ವರ್ಷ ತಂದೆ: ಹರೀಶ ವಾಸ: ಶಿವ ಪಾರ್ವತಿ ಮಂದಿರ ಎದುರು ಮನೆ ಬನ್ನೂರು ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು