Sunday, November 24, 2024
ಸುದ್ದಿ

ಕೇವಲ ಒಂದು ಸ್ಟೇಟಸ್‍ಗೇ ಮರುಗಿ ಸಹಾಯ ಹಸ್ತ ನೀಡಿದ ಭಜರಂಗದಳ ಬಂಟ್ವಾಳ ಪ್ರಖಂಡ –ಕಹಳೆ ನ್ಯೂಸ್

ಬಂಟ್ವಾಳ: ಬಾರ್ಯ ಗ್ರಾಮದ ಗಿರೀಗುಡ್ಡೆ ನಿವಾಸಿ ಬೆಳ್ತಂಗಡಿ ಪ್ರಸನ್ನ ಕಾಲೇಜಿನಲ್ಲಿ ಫೈನಲ್ ಈಯರ್ ವ್ಯಾಸಂಗ ನಡೆಸುತ್ತಿರುವ ಸುಮಂತ್ 20ವರ್ಷ ವಿಧಿಯ ಕ್ರೂರ ಲೀಲೆಗೆ ಬಲಿಯಾದ ಸುದ್ದಿ ಎಲ್ಲಾ ವಾಟ್ಸಾಫ್ ಗ್ರೂಪ್ ಗಳಲ್ಲಿ ಹರಿದಾಡಿತ್ತು ಅದರಲ್ಲೂ ಸುಮಂತ್ ಸಾಯುವ 5 ದಿವಸ ಮೊದಲು ತನ್ನ ವಾಟ್ಸಾಫ್ ನಲ್ಲಿ “ಹಿಂದುವಾಗಿ ಜನನ ಹಿಂದುವಾಗಿ ಮರಣ” ಅನ್ನುವ ಸ್ಟೇಟಸ್ ಹಾಕಿದ್ದ ಅದರ ಸ್ಕ್ರೀನ್ ಶಾಟ್ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು ಇದನ್ನು ಕಂಡ ಭಜರಂಗದಳ ಬಂಟ್ವಾಳ ಪ್ರಖಂಡದ ಸದಸ್ಯರು, ಕಾರ್ಯಕರ್ತರು ಸೇರಿಕೊಂಡು ಹಿಂದೂಗಳ ಕಷ್ಟಕ್ಕೆ ಸ್ಪಂದಿಸುವ “ದಾನವೇ ಧರ್ಮದ ಮೂಲ” ಎಂಬ ವಾಟ್ಸಾಫ್ ಗ್ರೂಪಿನ ಮೂಲಕ ಹಲವು ಕೊಡುಗೈ ದಾನಿಗಳ ಸಹಕಾರದೊಂದಿಗೆ ರೂ.77000 ಹಣ ಒಟ್ಟುಗೂಡಿಸಿ ಸುಮಂತ್ ತಾಯಿಯ ಕೈಗೆ ಹಸ್ತಾಂತರ ಮಾಡಲಾಯಿತು. ದಾನವೇ ಧರ್ಮದ ಮೂಲ ಎಂಬ ವಾಟ್ಸಾಫ್ ಗ್ರೂಪ್ ಇವರೆಗೆ ಹಲವು ಕೊಡುಗೈ ದಾನಿಗಳ ಸಹಕಾರದಿಂದ ಒಟ್ಟು 5ಲಕ್ಷದವರೆಗೆ ಧನ ಸಹಾಯ ಮಾಡಿದೆ ಇವತ್ತಿನ ಯೋಜನೆಯನ್ನು ವಿಶ್ವಹಿಂದುಪರಿಷದ್ ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮುಡೆಲ್ ಇವರು ಸುಮಂತ್ ತಾಯಿಯ ಕೈಗೆ ಹಸ್ತಾಂತರ ಮಾಡಿ ಇಡೀ ಹಿಂದೂ ಸಮಾಜ ಯಾವಾಗಲೂ ನಿಮ್ಮ ಜೊತೆ ಇರುತ್ತದೆ ಅನ್ನೋ ಭರವಸೆ ಮಾತುಗಳನ್ನು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಂಟ್ವಾಳ ಪ್ರಖಂಡದ ಸಂಚಾಲಕರಾದ ಶಿವ ಪ್ರಸಾದ್ ತುಂಬೆ ಸಂತೋμï ಕುಲಾಲ್ ಸರಪಾಡಿ ಅಭಿನ್ ರೈ ಪ್ರಸಾದ್ ಶಿವಾಜಿನಗರ ಬೆಂಜನಪದವು ಪ್ರವೀಣ್ ಕುಲಾಲ್ ಕುಂಟಲಪಲ್ಕೆ ಭಜರಂಗದಳ ಸರಪಾಡಿ ಖಂಡ ಸಮಿತಿಯ ಜವಾಬ್ದಾರಿಯುತ ಸದಸ್ಯರು ದಾನವೇ ಧರ್ಮದ ಮೂಲ ಗ್ರೂಪಿನ ಸದಸ್ಯರು ಬಾರ್ಯ ಸೇವಾ ಸಹಕಾರಿ ಸಂಘದ ಪ್ರಸನ್ನ ಗೌಡ ಪ್ರಸಾದ್ ಗೌಡ ಬಾರ್ಯ ಉಪಸ್ಥಿತರಿದ್ದರು.