ಮಣಿಪಾಲ: ಮಣಿಪಾಲ ಟೌನ್ ರೋಟರಿ, ಉಡುಪಿ ಪಾಲಿಟೆಕ್ನಿಕ್ ಇಂಟರಾಕ್ಟ್ ಕ್ಲಬ್, ಮಣಿಪಾಲ ಹಿಲ್ಸ್ ರೋಟರಿ ಮತ್ತು ಮಣಿಪಾಲ್ ಅಟೋ ಕ್ಲಬ್ ವತಿಯಿಂದ ಮಣಿಪಾಲ ಪೋಲೀಸ್ ಸ್ಟೇಷನ್ ಸಹಯೋಗದೊಂದಿಗೆ ರೆಡ್ ರೋಸ್ ಡೇ ಅನ್ನು ಆಚರಿಸಲಾಯಿತು.
ಕ್ಲಬ್ ಅಧ್ಯಕ್ಷ ರೋ. ನಿತ್ಯಾನಂದ ನಾಯಕ್ ಮಾತನಾಡಿ, ರಸ್ತೆ ಅಪಘಾತಗಳು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಪ್ರಾಣಹಾನಿಯನ್ನು ಉಂಟು ಮಾಡುತ್ತಿವೆ. ರಸ್ತೆ ನಿಯಮಗಳನ್ನು ಪಾಲಿಸದೇ ವಾಹನಗಳನ್ನು ಚಲಾಯಿಸುವುದು, ಅತಿ ವೇಗ, ಸೀಟ್ ಬೆಲ್ಟ್ ಮತ್ತು ಶಿರಸ್ತ್ರಾಣ ಧರಿಸದಿರುವುದು ಇದಕ್ಕೆ ಕಾರಣ. ಇದರ ಕುರಿತು ಜನರಿಗೆ ಪ್ರಜ್ಞೆಯನ್ನು ಮೂಡಿಸಲು ರಸ್ತೆಗಳಲ್ಲಿ ತಪ್ಪೆಸಗಿದವರನ್ನು ನಿಲ್ಲಿಸಿ ರೆಡ್ ರೋಸ್ ನೀಡಿ ಈ ತಪ್ಪನ್ನು ಮುಂದುವರಿಸದಂತೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಸ್ವಯಂಸೇವಕರು ಮಣಿಪಾಲದ ಹಲವು ಕಡೆ ರಸ್ತೆಗಳಲ್ಲಿ ಕಾನೂನು ಬಾಹಿರವಾಗಿ ವಾಹನ ಚಲಾಯಿಸುವವರನ್ನು ನಿಲ್ಲಿಸಿ ಎಚ್ಚರಿಕೆ ನೀಡಿದರು.
ಮಣಿಪಾಲ ಆಟೋ ಕ್ಲಬ್ ಸ್ಥಾಪಕ ಅಧ್ಯಕ್ಷ ನಿಶಾಂತ್ ಭಟ್, ರೋ. ಸವಿತಾ ಭಟ್, ರೋ. ಸುಂದರ ಶೆಟ್ಟಿ, ರೋ. ದಯಾನಂದ ನಾಯಕ್, ರೋ. ಉಮೇಶ್ ರಾವ್, ರೋ. ಗೋಪಾಲ್ ಗಾಣಿಗ ರೋ. ಕೆಂಪರಾಜ್. ರೋ. ಡಾ. ಶ್ರೀಧರ್,ಡಾ ದೀಪಕ್ ರಾಮ್ ಬಾಯರಿ, ರೋಟರಾಕ್ ಅಧ್ಯಕ್ಷ ಶ್ರೀ. ವಿಶ್ವೇಶ್ ರಾವ್, ನಿಂಗರಾಜ್, ಅಶ್ವಿನಿ, ಕಿರಣ್ ಮತ್ತಿತರರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಮಣಿಪಾಲ ಠಾಣಾಧಿಕಾರಿ ಮಂಜುನಾಥ್ ರವರ ನಿರ್ದೇಶನ ಮತ್ತು ಠಾಣೆಯ ಸಿಬ್ಬಂದಿ ವರ್ಗದ ಸಂಪೂರ್ಣ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು.