ಮಂಗಳೂರಿನಲ್ಲಿ ಮಾರಕಾಯುಧಗಳೊಂದಿಗೆ ದರೋಡೆಗೆ ಹೊಂಚು: ನಾಲ್ವರ ಬಂಧನ-ಇಬ್ಬರು ಎಸ್ಕೇಪ್ – ಕಹಳೆ ನ್ಯೂಸ್
ಮಂಗಳೂರು: ಮಾರಕಾಯುಧಗಳೊಂದಿಗೆ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಗ್ಯಾಂಗ್‌ವೊಂದನ್ನು ಮಂಗಳೂರು ನಗರ ಬಂದರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅನಿಶ್ ಅಶ್ರಫ್(24), ಶೇಖ್ ಮಹಮ್ಮದ್ ಹಾರಿಸ್(32), ಮಹಮ್ಮದ್ ಕೈಸ್(26), ಮೊಹಮ್ಮದ್ ಕಾಮಿಲ್ (33) ಎಂದು ಗುರುತಿಸಲಾಗಿದೆ. ಅಬ್ದುಲ್ ಖಾದರ್ ಫಹಾದ್ ಹಾಗೂ ಮತ್ತೋರ್ವ ಪರಾರಿಯಾಗಿದ್ದಾರೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕುದ್ರೋಳಿ ಮೊಯಿದ್ದೀನ್ ಮಸೀದಿ ಹಿಂಭಾಗದಲ್ಲಿ ಜು.14 ರಂದು ಮಧ್ಯಾಹ್ನದ ವೇಳೆಗೆ ಅನಿಶ್ ಅಶ್ರಪ್ ಮತ್ತು ಅಬ್ದುಲ್ ಖಾದರ್ ಫಹಾದ್ ಎಂಬವರು ಅವರ ಸಹಚರರೊಂದಿಗೆ ಸೇರಿ ದರೋಡೆ ಮಾಡಲು ಮಾರಕಾಯುಧಗಳೊಂದಿಗೆ ಹೊಂಚು ಹಾಕುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅವರಲ್ಲಿ ಅಬ್ದುಲ್ ಖಾದರ್ ಫಹಾದ್ ಹಾಗೂ ಮತ್ತೋರ್ವ ಆರೋಪಿ ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿದ್ದಾರೆ. ದಾಳಿ ವೇಳೆ ಆರೋಪಿಗಳ ಬಳಿಯಿಂದ ತಲವಾರು, ಚೂರಿ ಮತ್ತು ಮೆಣಸಿನ ಹುಡಿ ವಶಪಡಿಸಿಕೊಂಡಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.