Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ರೇವ್ (ಗಾಂಜಾ) ಪಾರ್ಟಿ ಬೇಟೆ ಬೆನ್ನಲ್ಲೇ ಎಸ್.ಐ. ರಾಜೇಶ್ ಕೆ.ವಿ. ಸಿಂಗಂ ಅವತಾರ ; ಪುತ್ತೂರಿನಲ್ಲಿ ರೌಂಡ್ಸ್ – ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ಪುತ್ತೂರಿನ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ ಅಂದರ್..! – ಕಹಳೆ ನ್ಯೂಸ್

ಪುತ್ತೂರು : ರೇವ್ ಪಾರ್ಟಿ ಬೆನ್ನಲ್ಲೇ ಆರೋಪಿಗಳ ಭೇಟೆ ಬೆನ್ನಲ್ಲೆ ನಗರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಜೇಶ್ ಕೆ ವಿಯವರಿಂದ ಮತ್ತೆ ಕಾರ್ಯಾಚರಣೆ.

ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರದ ದರ್ಬೆಯ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜ್ ಬಳಿ, ಅದೇ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿ ಮುಬಿನ್ ( 20 ) ಎಂಬಾತ ಪುತ್ತೂರು ನಗರ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಆದರಿಸಿ, ದಾಳಿ ನಡೆಸಿ ಸದರಿ ಆರೋಪಿಯನ್ನು ಸಾಕ್ಷಿ ಸಮೇತ ಬಂಧಿಸಲು ಯಶಸ್ವಿಯಾಗಿದ್ದು, ಆತನಿಂದ 550 ಗ್ರಾಂ ಗಾಂಜಾ ವಶಪಡಿಸಿಕೊಂಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಜಾಲದ ಹಿಂದೆ ಇರುವ ಕೈಯನ್ನು ಕಂಡು ಹಿಡಿಯಲು ಬಲೆ ಬೀಸಿದ್ದು ಪುತ್ತೂರು ನಗರ ಠಾಣೆಯಲ್ಲಿ ಅಕ್ರ 64 /2022 ಕಲಂ 8(c)20(ii)b NDPS act ರಂತೆ ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಉಪ ವಿಭಾಗದ ಪೊಲೀಸ್ ಅಧೀಕ್ಷಕರಾದ ಗಾನ ಕುಮಾರ್ ನಿರ್ದೇಶನದಂತೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಂತೆ ರಾಜೇಶ್ ಕೆವಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸ್ಕರಿಯಾ ಉದಯಕುಮಾರ್ ಜಗದೀಶ್ ಬಸವರಾಜ್ ಕಿರಣ್ ಸಂತೋಷ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ ಎಂದು ಪೋಲೀಸ್ ಮೂಲಕಗಳು ಮಾಹಿತಿ‌ ನೀಡಿದೆ.